ಇಳಿಕೆಯತ್ತ ತೈಲ ದರ: ಶನಿವಾರವೂ ಸಿಕ್ತು ಗುಡ್‍ನ್ಯೂಸ್ -ಯಾವ ದಿನ ಎಷ್ಟಿತ್ತು?

ನವದೆಹಲಿ: ಕಳೆದ ತಿಂಗಳು ಬೆಲೆ ಏರಿಕೆಯಾಗಿದ್ದ ತೈಲ ದರ ಈಗ ಕೆಲ ದಿನಗಳಿಂದ ನಿರಂತರ ಇಳಿಕೆಯಾಗುತ್ತಿದ್ದು ಶನಿವಾರವೂ ಮತ್ತೆ ಇಳಿಕೆಯಾಗಿದೆ. ಶನಿವಾರ ರಾಜಧಾನಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 40 ಪೈಸೆ ಇಳಿಕೆಯಾಗಿದ್ದರೆ, ಡೀಸೆಲ್ ಬೆಲೆ 35 ಪೈಸೆ ಇಳಿಕೆಯಾಗಿದೆ.

ಅಕ್ಟೋಬರ್ 19 ರಿಂದ ಇಳಿಕೆಯಾಗುತ್ತಿದ್ದು, ಪ್ರತೀ ಲೀಟರ್ ಪೆಟ್ರೋಲ್ ಬೆಲೆ 1.96 ರೂ. ಹಾಗೂ ಡೀಸೆಲ್ 99 ಪೈಸೆ ಇಳಿಕೆಯಾಗಿದೆ. ರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ 80.45 ರೂ. ಇದ್ದರೆ, ಡೀಸೆಲ್ ಬೆಲೆ 74.38 ರೂ. ಇದೆ. ಪ್ರಸ್ತುತ ವಾಣಿಜ್ಯ ನಗರಿ ಮುಂಬೈ ನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ ರೂ.85.93 ಹಾಗೂ ಡೀಸೆಲ್ ರೂ.77.96 ರೂ. ಇದೆ. ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು, ಅತಿ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ಸಿಗೋ ನಗರಗಳು

ಪೆಟ್ರೋಲ್ ದರ ಎಷ್ಟಿತ್ತು?

ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ ಶುಕ್ರವಾರಕ್ಕೆ ಹೋಲಿಸಿದರೆ 25 ಪೈಸೆ ಇಳಿಕೆಯಾಗಿದೆ. ಶುಕ್ರವಾರ 81.79 ರೂ. ಪೈಸೆ ಇದ್ದರೆ, ಇಂದು 81.54 ರೂ. ಪೈಸೆಯಿದೆ. ಸೆಪ್ಟೆಂಬರ್ ನಲ್ಲಿ ಈ ದಿನ 83.97 ರೂ. ಇತ್ತು. ಡೀಸೆಲ್ ಬೆಲೆ 75.16 ಇದ್ದು, ಶುಕ್ರವಾರಕ್ಕೆ ಹೋಲಿಸಿದರೆ 7 ಪೈಸೆ ಇಳಿಕೆಯಾಗಿದೆ. ಸೆಪ್ಟೆಂಬರ್ 27 ರಂದು ಡೀಸೆಲ್ ಬೆಲೆ 74.88 ರೂ. ಪೈಸೆ ಇತ್ತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಕಡಿಮೆಯಾಗುತ್ತಿರುವುದು ಮತ್ತು ಡಾಲರ್ ಮುಂದೆ ರೂಪಾಯಿ ನಿಧಾನವಾಗಿ ಬಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತೈಲ ದರಗಳು ಇಳಿಕೆಯಾಗುತ್ತಿವೆ. ಇದನ್ನೂ ಓದಿ: ಲೀಟರ್ ಪೆಟ್ರೋಲ್ ಬೆಲೆ 55 ರೂ., ಡೀಸೆಲ್ 50 ರೂ. ಆಗುತ್ತೆ: ಗಡ್ಕರಿ

ನಿರಂತರ ಬೆಲೆ ಏರುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ ಮೊದಲನೇ ವಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ 1.50 ರೂ. ಕಡಿತಗೊಳಿಸಿತ್ತು. ಇದರ ಜೊತೆಯಲ್ಲಿ ತೈಲ ಕಂಪನಿಗಳು 1 ರೂ. ಕಡಿತಗೊಳಿಸಿತ್ತು. ಕೇಂದ್ರ ಸರ್ಕಾರ ಕಡಿತಗೊಳಿಸಿದಂತೆ ರಾಜ್ಯ ಸರ್ಕಾರಗಳು ವ್ಯಾಟ್ ತೆರಿಗೆಯನ್ನು ಇಳಿಸುವಂತೆ ಹಣಕಾಸು ಸಚಿವ ಅರುಣ್ ಜೇಟ್ಲಿ ಸಲಹೆ ನೀಡಿದ್ದರು. ಇದನ್ನೂ ಓದಿ:  2030ರ ವೇಳೆಗೆ ಭಾರತದಲ್ಲಿ ಒಂದೇ ಒಂದು ಪೆಟ್ರೋಲ್, ಡೀಸೆಲ್ ಕಾರು ಮಾರಾಟವಾಗಲ್ಲ

ಡೀಸೆಲ್ ದರ ಎಷ್ಟಿತ್ತು?

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *