ವರದಕ್ಷಿಣೆಯಾಗಿ ಕೊಟ್ಟಿದ್ದ ಬೈಕ್ ಹಿಂಪಡೆದ ಮಾವ-ರಸ್ತೆಯಲ್ಲಿ ಉರುಳಾಡಿದ ಅಳಿಯ

ಲಕ್ನೋ: ಮಾವ ಮದುವೆಯಲ್ಲಿ ನೀಡಿದ್ದ ಬೈಕ್ ಹಿಂಪಡೆದಿದ್ದಕ್ಕೆ ಅಳಿಯ ರಸ್ತೆಯಲ್ಲಿ ಉರುಳಾಡಿದ ಘಟನೆ ಉತ್ತರ ಪ್ರದೇಶದ ಮಹರಾಜಗಂಜ್ ಜಿಲ್ಲೆಯಲ್ಲಿ ನಡೆದಿದೆ.

ಸಿಂದುರಿಯಾ ಚೌಕ ವ್ಯಾಪ್ತಿಯ ಅಂತರ್ಗತ ಗ್ರಾಮದ ಸಫರ್ ಹುಸೇನ್ ರಸ್ತೆಯಲ್ಲಿ ಉರುಳಾಡಿದ ಅಳಿಯ. ನಾಲ್ಕು ತಿಂಗಳ ಹಿಂದೆ ಹುಸೇನ್ ಮದುವೆ ಆಗಿತ್ತು. ಈ ವೇಳೆ ಮದುವೆಯಲ್ಲಿ ಆತನಿಗೆ ವರದಕ್ಷಿಣೆ ಜೊತೆ ಬೈಕ್ ಸಹ ನೀಡಿದ್ದರು. ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡಿಕೊಂಡಿದ್ದ ಹುಸೇನ್ ಮದುವೆಯ ನಂತರ ಮನೆಯಲ್ಲಿಯೇ ಉಳಿದುಕೊಂಡಿದ್ದನು.

ಮದುವೆಯಲ್ಲಿ ನೀಡಿದ್ದ ವರದಕ್ಷಿಣೆಯನ್ನು ಬಳಸಿಕೊಂಡು ಜೀವನ ಸಾಗಿಸುತ್ತಿದ್ದನು. ಕೊನೆಗೆ ಮದುವೆಯಲ್ಲಿ ನೀಡಿದ್ದ ಬೈಕ್ ಸಹ ಮಾರಲು ಯತ್ನಿಸಿದ್ದಾನೆ. ವಿಷಯ ತಿಳಿದು ಮಾವ ಬೈಕ್ ವಾಪಾಸ್ಸು ತೆಗೆದುಕೊಂಡು ಬಂದಿದ್ದಾರೆ. ಇದರಿಂದ ಕೋಪಗೊಂಡ ಹುಸೇನ್ ಮಾವನ ಮನೆಗೆ ಬಂದು ಗಲಾಟೆ ಮಾಡಿದ್ದಾನೆ. ಕೊನೆಗೆ ಮಾವ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.

ಅಳಿಯನನ್ನು ವಶಪಡಿಸಿಕೊಂಡು ಪೊಲೀಸರು ಕೆಲ ಸಮಯದ ಬಳಿಕ ಬುದ್ದಿ ಹೇಳಿ ಕಳುಹಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಸಿಂದುರಿಯಾ-ನಿಚಲೌಲ ಮಾರ್ಗದಲ್ಲಿ ಮಲಗಿಕೊಂಡು ಉರುಳಾಡಿದ್ದಾನೆ. ಹುಸೇನನ ಅವಾಂತರ ನೋಡಿ ಜನರು ಸೇರಿದ್ದರಿಂದ ಟ್ರಾಫಿಕ್ ಸಮಸ್ಯೆಯುಂಟಾಗಿತ್ತು. ಕೊನೆಗೆ ಪೊಲೀಸರು ಬಂದು ಮತ್ತೊಮ್ಮೆ ಹುಸೇನನ್ನು ವಶಕ್ಕೆ ಪಡೆದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *