ಬೆಂಗ್ಳೂರಿಗೆ ಬಂದಿದೆ ಐನಾತಿ ಗ್ಯಾಂಗ್ – ಸ್ಕೆಚ್ ಹಾಕಿದ್ರೆ ಮುಗೀತು ಹಣವಿದ್ದವರು ಯಾಮಾರೋದು ಗ್ಯಾರಂಟಿ!

ಬೆಂಗಳೂರು: ಕಳ್ಳರ ಐನಾತಿ ಗ್ಯಾಂಗ್‍ವೊಂದು ಸಿಲಿಕಾನ್ ಸಿಟಿಗೆ ಲಗ್ಗೆಇಟ್ಟಿದ್ದು, 8 ಲಕ್ಷ ರೂ. ಹಣವನ್ನು ಎಗರಿಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಕಾಸ್ಟ್ಲಿ ಕಾರಿನಲ್ಲಿ ಶಾಪಿಂಗ್‍ಗೆ ಬಂದರೆ ಸಾಕು ಗ್ಯಾಂಗ್‍ನ ಸರ್ವರೂ ಹಾಜರ್ ಆಗಿರುತ್ತಾರೆ. ನೋಡಲು ಸಾಮಾನ್ಯ ಜನರಂತೆ ಕಂಡರೂ ಖತರ್ನಾಕ್ ಕೆಲ್ಸವನ್ನು ಮಾಡುತ್ತಾರೆ. ಇವರು ಸ್ಕೆಚ್ ಹಾಕಿದರೆ ಮುಗೀತು ಹಣವಿದ್ದವರು ಗ್ಯಾರಂಟಿ ಹಣವನ್ನು ಕಳೆದುಕೊಳ್ಳುತ್ತಾರೆ.

ಇದೇ ರೀತಿ ಶಾಪಿಂಗ್‍ಗೆ ಬಂದ ಉದ್ಯಮಿ ಮೇಲೆ ಈ ಐವರ ಖತರ್ನಾಕ್ ಕಣ್ಣುಗಳು ಬಿದ್ದಿದೆ. ಕಾರಿನಲ್ಲಿ ಬಂದವರನ್ನ ಮಾತನಾಡಿಸೋಕೆ ಒಬ್ಬ, ಗಮನಿಸಲು ಇಬ್ಬರು, ಗಮನ ಬೇರೆಡೆ ಸೆಳೆಯೋಕೆ ಒಬ್ಬ, ಬ್ಯಾಗ್ ಎಗರಿಸೋಕೆ ಇನ್ನೊಬ್ಬ ಹೀಗೆ ಈ ಕಳ್ಳರ ಗ್ಯಾಂಗ್ ಕಾರಿಂದ ಬರೋಬ್ಬರಿ 8 ಲಕ್ಷ ಎಗರಿಸಿದ್ದಾರೆ. ಕಳ್ಳರ ಕೈಚಳಕದ ಖಮಾಲ್ ಸಂಪೂರ್ಣ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಸಿಟಿವಿಯಲ್ಲಿ ಏನಿದೆ?
ಕಾರಿನ ಬಳಿ ಒಬ್ಬ ಕಳ್ಳ ಬಂದು ಸ್ವಲ್ಪ ಸಮಯಗಳ ಕಾಲ ಕಾರಿನ ಪಕ್ಕದಲ್ಲೇ ನಿಂತು ಗಮನಿಸುತ್ತಿರುತ್ತಾನೆ. ಈ ವೇಳೆ ಕಾರಿನ ಚಾಲಕನ ಗಮನ ಬೇರೆಡೆ ಇರುತ್ತದೆ. ಇದೇ ಸಂದರ್ಭವನ್ನು ನೋಡಿಕೊಂಡು ಕಳ್ಳ ಕಾರಿನಲ್ಲಿದ್ದ 5 ಲಕ್ಷದ ರೂ. ಹಣವಿದ್ದ ಬ್ಯಾಗ್ ಅನ್ನು ಕಾರಿನ ಡೋರ್ ತೆಗೆದು ಎಗರಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.

ಈ ಘಟನೆ ಕುರಿತು ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=1lrCd2rE1yQ&feature=youtu.be

Comments

Leave a Reply

Your email address will not be published. Required fields are marked *