ಸಾಥ್ ನೀಡದ ಕಮಲ ಪಾಳಯದ ನಾಯಕರು-ಒಂಟಿಯಾಗಿ ಕ್ಷೇತ್ರದೆಲ್ಲೆಡೆ ಶ್ರೀರಾಮುಲು ಪ್ರಚಾರ

ಬಳ್ಳಾರಿ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ರಂಗೇರಿದ್ದು, ಕಾಂಗ್ರೆಸ್ ಅಬ್ಬರದ ಪ್ರಚಾರ ನಡೆಸುತ್ತಿದೆ. ಆದರೆ ಬಿಜೆಪಿ ಅಭ್ಯರ್ಥಿ ಜೆ.ಶಾಂತ ಪರ ಶಾಸಕ ಶ್ರೀರಾಮುಲುರನ್ನು ಹೊರತು ಪಡಿಸಿ, ಯಾವುದೇ ಕಮಲ ಪಾಳಯದ ನಾಯಕರು ಹಾಜರಾಗದೇ ಇರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಹೌದು, ಇತಂಹದ್ದೊಂದು ಪ್ರಶ್ನೆ ಇದೀಗ ಬಳ್ಳಾರಿ ಬಿಜೆಪಿ ಕಾರ್ಯಕರ್ತರನ್ನು ಕಾಡುತ್ತಿದೆ. ಯಾಕೆಂದರೆ ಬಳ್ಳಾರಿ ಲೋಕಸಭಾ ಉಪಚುನಾವಣೆಯ ದಿನಾಂಕ ಷೋಷಣೆಯಾಗಿ ಅಭ್ಯರ್ಥಿ ಆಯ್ಕೆ ಆದ ನಂತರವೂ, ಬಿಜೆಪಿ ಪಾಳಯದಲ್ಲಿ ಚುನಾವಣಾ ಕಾವು ಮಾತ್ರ ಕಂಡು ಬರುತ್ತಿಲ್ಲ. ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಂಸದೆ ಜೆ ಶಾಂತಾ ನಾಮಪತ್ರ ಸಲ್ಲಿಸಿ, ಕ್ಷೇತ್ರದೆಲ್ಲೆಡೆ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿ ಶಾಂತಾ ಮತ್ತು ಶಾಸಕ ಶ್ರೀರಾಮುಲುಗೆ ಬಿಜೆಪಿ ರಾಜ್ಯ ಮತ್ತು ಕೇಂದ್ರ ನಾಯಕರು ಸಾಥ್ ನೀಡದಿರುವುದು ಬಿಜೆಪಿ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಪರವಾಗಿ 6 ಸಚಿವರು, 10 ಸಂಸದರು ಸೇರಿದಂತೆ ಹಲವು ಶಾಸಕರ 51 ಜನರ ತಂಡವೇ ಬಳ್ಳಾರಿಯಲ್ಲಿ ಬಿಡುಬಿಟ್ಟು, ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಬಿಜೆಪಿ ಪರವಾಗಿ ಕೇವಲ ಶ್ರೀರಾಮುಲು ಮಾತ್ರ ಪ್ರಚಾರ ನಡೆಸುತ್ತಿದ್ದು, ಶಾಸಕ ಶ್ರೀರಾಮುಲುಗೆ ಬಿಜೆಪಿ ನಾಯಕರ ಸಾಥ್ ಇಲ್ಲದಿರುವುದು ಈಗ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಶಾಸಕ ಶ್ರೀರಾಮುಲು, ಶಾಂತಾ ಒಂಟಿಯಾಗಿ ಪ್ರಚಾರ ನಡೆಸುತ್ತಿರುವುದು ಬಿಜೆಪಿ ಪಾಳಯದ ಉತ್ಸಾಹವನ್ನೆ ಅಡಗಿಸಿದಂತಾಗಿದೆ ಎನ್ನುವ ಮಾತುಗಳು ಜಿಲ್ಲೆಯಲ್ಲಿ ಕೇಳಿಬರುತ್ತಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *