ನವದೆಹಲಿ: ಇಲ್ಲಿನ ರೆಸಿಡೆಸ್ಸಿಯಲ್ ಪ್ರದೇಶವೊಂದರಲ್ಲಿ 75 ವರ್ಷದ ವೃದ್ಧನೊಬ್ಬ ತನ್ನ 72 ವರ್ಷದ ಪತ್ನಿಯನ್ನು ಕತ್ತನ್ನು ಕೊಯ್ದು ತಾನು ಕೈ ಕೊಯ್ದುಕೊಂಡಿರುವ ಘಟನೆ ಗುರ್ಗಾಂವ್‍ನಲ್ಲಿ ನಡೆದಿದೆ.
ಪತ್ನಿ ಗುಲ್‍ಮೆಹರ್ ಕೌರ್ ಅವರು ಪತಿ ಹರ್ನೆಕ್ ಸಿಂಗ್ ಅವರಿಂದಲೇ ಹತ್ಯೆಗೆ ಒಳಗಾಗಿದ್ದಾರೆ. ಈ ದಂಪತಿ ಇಲ್ಲಿನ ಡಿಎಲ್‍ಎಫ್ ಫೇಸ್ 2 ಪ್ರದೇಶದಲ್ಲಿ ನೆಲೆಸಿದ್ದರು. ಘಟನೆ ನಡೆದ ಬಳಿಕ ದಂಪತಿಯ ಸಂಬಂಧಿಕರು ಪಂಜಾಬ್‍ನಿಂದ ಕರೆ ಮಾಡಿ ಮಾಹಿತಿ ನೀಡಿದ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ, ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪತ್ನಿ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಪತಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಪತ್ನಿಯ ಕತ್ತನ್ನು ಕೊಯ್ದು ಬಳಿಕ ಪತಿ ತಮ್ಮ ಮಣಿಕಟ್ಟು ಕೊಯ್ದುಕೊಂಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ವಿಲ್ ರೀತಿಯ ಡೆತ್‍ನೋಟ್ ಪತ್ತೆಯಾಗಿದ್ದು, ಅದರಲ್ಲಿ ಅವರ ಆಸ್ತಿ ವಿಂಗಡಣೆಯ ಬಗ್ಗೆ ಹೇಳಲಾಗಿದೆ ಎಂದು ಪೊಲೀಸ್ ಆಯುಕ್ತ ಕರಣ್ ಗೋಯಲ್ ತಿಳಿಸಿದ್ದಾರೆ.
ದಂಪತಿಯ ವಿವಾಹಿತ ಮಗ ಆಸ್ಟ್ರೇಲಿಯಾದಲ್ಲಿದ್ದು, ಮಗಳು ಕೆನೆಡಾದಲ್ಲಿ ನೆಲೆಸಿದ್ದಾರೆ. ಅವರಿಬ್ಬರ ಬರುವಿಕೆಗೆ ಕಾಯುತ್ತಿದ್ದು, ಅವರು ಆಗಮಿಸಿದ ಬಳಿಕವಷ್ಟೇ ಮತ್ತಷ್ಟು ಮಾಹಿತಿ ಸಿಗಲಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply