ರಾಮನಗರ ನಗರದಲ್ಲಿ ಎಚ್‍ಡಿಕೆಗೆ ಆದಂತೆ ಆಗದೇ ಇರಲು ಅನಿತಾ ಕುಮಾರಸ್ವಾಮಿ ಸಭೆ

ರಾಮನಗರ: ಉಪಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಒಮ್ಮತದ ಅಭ್ಯರ್ಥಿ ಮತಗಳಿಕೆ ಹೆಚ್ಚಿಸಲು ಅನಿತಾ ಕುಮಾರಸ್ವಾಮಿ ರಾಮನಗರ ನಗರದಲ್ಲಿ ಸಭೆ ನಡೆಸುತ್ತಿದ್ದಾರೆ.

ಹೊರವಲಯದ ಹಿಲ್ ವ್ಯೂ ರೆಸಾರ್ಟ್ ನಲ್ಲಿ ರಾಮನಗರ ಟೌನ್ ಮುಖಂಡರ ಸಭೆ ನಡೆಸಿದ್ದಾರೆ. ನಗರಸಭೆ ವ್ಯಾಪ್ತಿಯ 31 ವಾರ್ಡ್ ಗಳ ಮುಖಂಡರ ಸಭೆಯಲ್ಲಿ ಚುನಾವಣಾ ರಣತಂತ್ರಗಳನ್ನು ಅನಿತಾ ಕುಮಾರಸ್ವಾಮಿ ಚರ್ಚಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರಿಗೆ ರಾಮನಗರ ಟೌನ್ ನಲ್ಲಿ ಹಿನ್ನಡೆಯನ್ನುಂಟಾಗಿತ್ತು. 20 ಸಾವಿರಕ್ಕೂ ಅಧಿಕ ಮುನ್ನಡೆಯಲ್ಲಿದ್ದ ಕುಮಾರಸ್ವಾಮಿ ರಾಮನಗರ ಟೌನ್ ಮತ ಏಣಿಕೆ ವೇಳೆ 578 ಮತಗಳ ಹಿನ್ನೆಡೆ ಅನುಭವಿಸಿದ್ದರು. ಈ ಚುನಾವಣೆಯಲ್ಲಿ ಈ ರೀತಿ ಆಗದೇ ಇರಲು ಚರ್ಚೆ ನಡೆಸಿದ್ದಾರೆ.

ಟೌನ್ ನಲ್ಲಿ ಪ್ರಚಾರ ಕಾರ್ಯ ಹೇಗೆ ನಡೆಸಬೇಕೆಂಬ ಚರ್ಚೆ ನಡೆದಿದೆ. ಕಳೆದ ಬಾರಿಯ ಹಿನ್ನೆಡೆಗೆ ಕಾರಣಗಳು ಏನು ಎನ್ನುವುದರ ಬಗ್ಗೆಯೂ ಚರ್ಚೆ ನಡೆದಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ 92,626 ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ 69,990 ಮತಗಳನ್ನು ಪಡೆದಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *