ಆಯಧ ಪೂಜೆ ವೇಳೆ ಬಂದೂಕುಧಾರಿಯಿಂದ ಎಡವಟ್ಟು..!

ದಾವಣರೆಗೆ: ಆಯುಧ ಪೂಜೆಗೆ ಕೆಲಸ ಮಾಡಲು ಸಹಾಯವಾಗುವ ಸಾಮಾಗ್ರಿಗಳನ್ನು ಹಾಗೂ ವಾಹನಗಳನ್ನು ಇಟ್ಟು ಪೂಜೆ ಮಾಡುವುದು ಸರ್ವೇ ಸಾಮಾನ್ಯ. ಆದರೆ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಹತ್ತಕ್ಕಿಂತ ಹೆಚ್ಚು ಗನ್ ಗಳನ್ನಿಟ್ಟು ಪೂಜೆ ಸಲ್ಲಿಸುವ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ.

ದಾವಣಗೆರೆಯ ಕುಂದುವಾಡ ಗ್ರಾಮದ ಗಜಾನನ ಎಂಬವರು ಆಯುಧ ಪೂಜೆಗೆ ಪಿಸ್ತೂಲ್, ಕೋವಿ ಹಾಗೂ ಲಾಂಗ್ ಗಳನ್ನು ಇಟ್ಟು ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಗನ್‍ಗಳಿಗೆ ಸುಮ್ಮನೆ ಪೂಜೆ ಮಾಡುವುದು ಬಿಟ್ಟು, ಬಂಧುಗಳ ಮುಂದೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಗಾಳಿಯಲ್ಲಿ ಗುಂಡು ಹಾರಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಅಲ್ಲದೇ ಗಜಾನನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಪೂಜೆಗೆ ಇಟ್ಟ ಪಿಸ್ತೂಲ್ ಹಾಗೂ ಕೋವಿಗಳಿಗೆ ಪರ್ಮಿಟ್ ಪಡೆದಿದ್ದಾರೆ ಎನ್ನಲಾಗಿದೆ. ಪಿಸ್ತೂಲ್ ಗಳಿಂದ ಗುಂಡು ಹಾರಿಸಬಾರದು ಎನ್ನುವ ಕಾನೂನು ಇದೆ. ಆದ್ರೆ ಗಜಾನನ ಹಾಗೂ ಆತನ ಸಂಬಂಧಿಗಳು ಪೂಜೆ ನಂತರ ಗಾಳಿಯಲ್ಲಿ ಗುಂಡು ಹಾರಿಸಿ ಆಯುಧಪೂಜೆ ಆಚರಣೆ ಮಾಡಿದ್ದು, ಇದೀಗ ಪೇಚಿಗೆ ಸಿಲುಕಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *