– ಕಾಮುಕನ ವಿರುದ್ಧ ದೂರು ದಾಖಲಿಸಿಕೊಳ್ಳದ ಪೊಲೀಸರು
– ಪೊಲೀಸರಿಂದ ನಂಬರ್ ಬದಲಾಯಿಸು ಎಂದು ಬಿಟ್ಟಿ ಸಲಹೆ
ಬೆಂಗಳೂರು: ವಾಟ್ಸಪ್ ಮೂಲಕ ಯುವತಿಗೆ ನಿನ್ನ ತಾಯಿಯ ಜೊತೆ ದೈಹಿಕ ಸಂಬಂಧ ಬೆಳೆಸಿದ್ದೇನೆ, ಈಗ ನಿನ್ನ ಸರದಿ. ನಿನ್ನನ್ನು ನಾನು ಟ್ರೈ ಮಾಡಬೇಕು ಎಂದು ಅಶ್ಲೀಲವಾಗಿ ಮೆಸೇಜ್ ರವಾನಿಸುತ್ತಿದ್ದ ಯುವಕನ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪೊಲೀಸರು ಮೊಬೈಲ್ ನಂಬರ್ ಬದಲಾಯಿಸುವಂತೆ ಸಲಹೆ ನೀಡಿದ್ದಾರೆ.
ಲೈಂಗಿಕ ದೌರ್ಜನ್ಯ ದೂರು ಕೊಡಲು ಹೋದರೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸದೇ ಮೆಸೇಜ್ ಬಂದರೆ ನಿರ್ಲಕ್ಷ್ಯ ಮಾಡಿ ಅಥವಾ ನಂಬರ್ ಬದಲಾಯಿಸುವಂತೆ ಸಲಹೆ ನೀಡಿದ್ದಾರೆ. ಇದು ಬೆಂಗಳೂರು ಪೊಲೀಸರು ನೀಡುವ ನ್ಯಾಯದ ಪರಿಯೆಂದು ದೌರ್ಜನ್ಯಕ್ಕೆ ಒಳಗಾದ ಯುವತಿಯ ಪರವಾಗಿ ಸ್ನೇಹಿತೆಯೊಬ್ಬರು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯುವತಿ ನಂಬರಿಗೆ ವೇಶ್ಯೆಯೆಂದು ಹಾಕಿ ಅಶ್ಲೀಲ ಸಂದೇಶ ಹಾಗೂ ಚಿತ್ರಗಳನ್ನು ಯುವಕರು ಹಾಕುತ್ತಿದ್ದರು. ಈ ಬಗ್ಗೆ ದೂರು ನೀಡಲು ಹೋದ ಯುವತಿಗೆ ಪೊಲೀಸರು ಇಂತಹ ಬಿಟ್ಟಿ ಸಲಹೆ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
https://twitter.com/ChaudhuriPooja/status/1051747241528975360
ಸ್ನೇಹಿತೆ ಹೇಳಿದ್ದು ಏನು?
ನನಗೆ ಲೈಂಗಿಕ ದೌರ್ಜನ್ಯ ನೀಡುತ್ತಿದ್ದಾರೆ. ಅಲ್ಲದೇ ನಿನ್ನ ತಾಯಿಯ ಜೊತೆ ದೈಹಿಕ ಸಂಬಂಧ ಬೆಳೆಸಿದ್ದೇನೆ, ಈಗ ನಿನ್ನ ಸರದಿ. ನಿನ್ನನ್ನು ನಾನು ಟ್ರೈ ಮಾಡಬೇಕು ಎಂದು ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದಾರೆ ಅಂತಾ ಪೊಲೀಸರಿಗೆ ದೂರು ನೀಡಲು ಸ್ನೇಹಿತೆ ಹೋಗಿದ್ದಾಳೆ. ಈ ವೇಳೆ ಪೊಲೀಸರು ಆಕೆಯನ್ನು ಬೈದು ಫೋನ್ ನಂಬರ್ ಚೇಂಚ್ ಮಾಡು ಇಲ್ಲದಿದ್ದರೆ ಆ ಮೆಸೇಜ್ ನಿರ್ಲಕ್ಷ್ಯಿಸು ಎಂದು ಸಲಹೆ ನೀಡಿದ್ದಾರೆ.

ಆ ವ್ಯಕ್ತಿ ನನ್ನ ಸ್ನೇಹಿತೆಯ ಸಹದ್ಯೋಗಿಗಳಿಗೂ ಇಂತಹ ಅಶ್ಲೀಲ ಮೆಸೇಜ್ಗಳನ್ನು ಮಾಡುತ್ತಾನೆ. ನಾನು ನನ್ನ ಸ್ನೇಹಿತೆಗೆ ಬಂದ ಮೆಸೇಜ್ ಸ್ಕ್ರೀನ್ ಶಾಟ್ ಹಾಕಿದ್ದೇನೆ. ಆಕೆಯ ಸುರಕ್ಷಿತೆಗಾಗಿ ನಾನು ಆಕೆಯ ಮುಖ ಹಾಗೂ ನಂಬರ್ ಅನ್ನು ಬ್ಲರ್ ಮಾಡಿದ್ದೇನೆ. ನನ್ನ ಸ್ನೇಹಿತೆ ಇದುವರೆಗೂ 60 ಫೋನ್ ನಂಬರ್ ಬ್ಲಾಕ್ ಮಾಡಿದ್ದಾಳೆ. ಕೆಲವರು ಫೇಕ್ ಐಡಿ ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಆಕೆಗೆ ಬೆದರಿಕೆ ಹಾಕುತ್ತಾರೆ. ಈ ಪ್ರಕರಣವನ್ನು ನಿಲ್ಲಿಸುವುದ್ದಕ್ಕೆ ಆತ 40 ಸಾವಿರ ರೂ. ಬೇಡಿಕೆಯಿಟ್ಟಿದ್ದಾನೆ. ಸದ್ಯ ನನ್ನ ಸ್ನೇಹಿತೆ ಬ್ಲಾಕ್ ಮಾಡಿದ ಆ 60 ಫೋನ್ ನಂಬರ್ ಅನ್ನು ಪೊಲೀಸರಿಗೆ ನೀಡಿದ್ದಾಳೆ.
ಸದ್ಯ ಬೆಂಗಳೂರು ಸಿಟಿ ಪೊಲೀಸರು ಸ್ನೇಹಿತೆಯ ಟ್ವೀಟ್ ಗೆ ರೀ-ಟ್ವೀಟ್ ಮಾಡಿ ಆ ಪೊಲೀಸ್ ಠಾಣೆಯ ಮಾಹಿತಿ ಕೇಳಿದ್ದಾರೆ. ಆಗ ಯುವತಿ ಎಲೆಕ್ಟ್ರಾನಿಕ್ ಪೊಲೀಸ್ ಠಾಣೆಯೆಂದು ಟ್ವೀಟ್ ಮಾಡಿ ಉತ್ತರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply