ವಿದ್ಯಾರ್ಥಿಯಿಂದ ಮಾಡೆಲ್ ಕೊಲೆ – ಸೂಟ್‍ಕೇಸ್‍ನಲ್ಲಿ ಶವ ತುಂಬಿ ಬಿಸಾಡಿದ

ಮುಂಬೈ: ಮಾಡೆಲ್‍ನನ್ನು ವಿದ್ಯಾರ್ಥಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿ ಶವವನ್ನು ಸೂಟ್‍ಕೇಸ್‍ನಲ್ಲಿ ತೆಗೆದುಕೊಂಡು ಹೋಗಿ ಬಿಸಾಡಿದ ಪ್ರಕರಣವೊಂದು ಮಹರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

ಮಾನ್ಸಿ ದೀಕ್ಷಿತ್(20) ಕೊಲೆಯಾದ ಮಾಡೆಲ್. 20 ವರ್ಷದ ವಿದ್ಯಾರ್ಥಿ ಮುಜಾಮಿಲ್ ಸೈಯಿದ್ ಮಾಡೆಲ್ ಹತ್ಯೆ ಮಾಡಿ ಅಂಧೇರಿಯಿಂದ ಮಲಾಡ್‍ಗೆ ಶವವನ್ನು ಸೂಟ್‍ಕೇಸ್‍ನಲ್ಲಿ ತೆಗೆದುಕೊಂಡು ಹೋಗಿ ಬಿಸಾಕಿದ್ದಾನೆ.

ಕೊಲೆಯಾದ ಮಾನ್ಸಿ ದೀಕ್ಷಿತ್ ಮಾಡೆಲ್ ಆಗಲು ರಾಜಸ್ಥಾನದಿಂದ ಮುಂಬೈಗೆ ಬಂದಿದ್ದಳು. ಮಾನ್ಸಿ ದೀಕ್ಷಿತ್ ಇಂಟರ್ ನೆಟ್‍ನಲ್ಲಿ ಪರಸ್ಪರ ಪರಿಚಯ ಮಾಡಿಕೊಂಡಿದ್ದಾರೆ. ಸೋಮವಾರ ಮಧ್ಯಾಹ್ನ ಅಂಧೇರಿಯಲ್ಲಿರುವ ಸೈಯಿದ್ ಅಪಾರ್ಟ್‍ಮೆಂಟ್‍ನಲ್ಲಿ ಭೇಟಿಯಾಗಿದ್ದಾಳೆ. ಈ ವೇಳೆ ಮಾತಿಗೆ ಮಾತು ಬೆಳೆದು ಸೈಯಿದ್ ಕೈಗೆ ಸಿಕ್ಕ ವಸ್ತುವಿನಿಂದ ಹಲ್ಲೆ ಮಾಡಿದ್ದಾನೆ.

ಮಾನ್ಸಿ ದೀಕ್ಷಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸೂಟ್‍ಕೇಸ್‍ನಲ್ಲಿ ಹೊತ್ತು ಖಾಸಗಿ ಕ್ಯಾಬ್‍ನಲ್ಲಿ ಅಂಧೇರಿಯಿಂದ ಮಲಾಡ್‍ಗೆ ಸಾಗಿಸಿದ್ದಾನೆ. ನಂತರ ಮಲಾಡ್‍ನ ನಿರ್ಜನ ಪ್ರದೇಶದಲ್ಲಿ ಶವ ಬಿಸಾಡಿ ಆಟೋ ರಿಕ್ಷಾದಲ್ಲಿ ಹೊರಟ ಸೈಯೀದ್‍ನನ್ನು ಗಮನಿಸಿದ ಕ್ಯಾಬ್ ಡ್ರೈವರ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಕ್ಷಣ ಮಾತ್ರದಲ್ಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಮಾಡೆಲ್ ಶವ ಪತ್ತೆಯಾಗಿದೆ. ಸದ್ಯ ಆರೋಪಿ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಮಾನ್ಸಿ ದೀಕ್ಷಿತ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಆರೋಪಿಯನ್ನು ಕೋರ್ಟ್‍ಗೆ ಹಾಜರು ಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *