ನಿನ್ನೆ ಬೆಂಗ್ಳೂರು.. ಇಂದು ಬೆಳಗಾವಿ- ಸಿಎಂ ಎಚ್ಚರಿಕೆ ಕೊಟ್ರೂ ನಿಲ್ತಿಲ್ಲ ಬಡ್ಡಿ ದಂಧೆಕೋರರ ಕಿರುಕುಳ

ಬೆಳಗಾವಿ: ಸಿಎಂ ಕುಮಾರಸ್ವಾಮಿ ಎಷ್ಟೇ ಎಚ್ಚರಿಕೆ ಕೊಟ್ಟರೂ ಮೀಟರ್ ದಂಧೆಕೋರರ ಅಟ್ಟಹಾಸ ನಿಲ್ಲುತ್ತಿಲ್ಲ. ಶುಕ್ರವಾರವಷ್ಟೇ ಬೆಂಗಳೂರಿನಲ್ಲಿ ನಡೆದ ಪ್ರಕರಣವೊಂದನ್ನು ಪಬ್ಲಿಕ್ ಟಿವಿ ಬಯಲಿಗೆಳೆದಿತ್ತು. ಈಗ ಬೆಳಗಾವಿಯಲ್ಲೂ ಮೀಟರ್ ಬಡ್ಡಿ ದಂಧೆಕೋರರ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ.

ಶಹಾಪುರದಲ್ಲಿ ಕೈಮಗ್ಗ ಕಾರ್ಖಾನೆ ಇಟ್ಟುಕೊಂಡಿದ್ದ ಶಾಂತಾ ಮತ್ತು ಬಾಬು ಎಂಬವರು ಒಟ್ಟು 8 ಜನರ ಬಳಿಯಿಂದ 5 ಪರ್ಸೆಂಟ್ ಬಡ್ಡಿಗೆ 16 ಲಕ್ಷ ಸಾಲ ಮಾಡಿದ್ರು. ತಿಂಗಳು ತಿಂಗಳು ಸರಿಯಾಗೆ ಬಡ್ಡಿ ಕಟ್ಟುತ್ತಿದ್ದರು. ಆದ್ರೆ ಈ ತಿಂಗಳು ಬಡ್ಡಿ ಕಟ್ಟಲು ನಾಲ್ಕು ದಿನ ತಡವಾಗಿದ್ದಕ್ಕೆ ಸುಮಾರು ಮೂವತ್ತಕ್ಕೂ ಹೆಚ್ಚು ಜನ ಇವರ ಕಾರ್ಖಾನೆಗೆ ನುಗ್ಗಿ ಹೇಳದೆ ಕೇಳದೆ 14 ಸೀರೆ ನೇಯುವ ಮಗ್ಗವನ್ನ ಹೊತ್ಕೊಂಡು ಹೋಗಿದ್ದಾರೆ. ಇದನ್ನೂ ಓದಿ: ತಂದೆ ಮುಂದೆನೇ ಸೀರೆ ಎಳೆದಾಡಿ ಮಗಳಿಗೆ ಲೈಂಗಿಕ ಕಿರುಕುಳ!

ಈ ವೇಳೆ ತಡೆಯುವ ಪ್ರಯತ್ನ ಮಾಡಿದ ಹೆಂಡತಿ ಶಾಂತಾಗೆ ಧಮ್ಕಿ ಹಾಕಿದ್ದಾರೆ. ಈ ಕುರಿತು ಶಹಾಪುರ ಠಾಣೆಗೆ ದೂರು ನೀಡಿ ಇದನ್ನ ತಡೆಯುವಂತೆ ವಿನಂತಿಸಿಕೊಂಡ್ರೆ, ಪೊಲೀಸರು ದಂಧೆಕೋರರ ಪರವಾಗಿ ಮಾತನಾಡಿ ಇವರನ್ನೇ ಬೈದು ಕಳುಹಿಸಿದ್ದಾರೆ. ಕೈಮಗ್ಗದ ದುಡಿಮೆಯನ್ನೇ ನಂಬಿಕೊಂಡಿದ್ದ ಇವರು ಸಾಲಗಾರರ ಕಿರುಕುಳಕ್ಕೆ ಎಲ್ಲವನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=M9g9VjA82zg

 

Comments

Leave a Reply

Your email address will not be published. Required fields are marked *