ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡರ ಬಣದ ಕಾರ್ಯಕರ್ತರಿಂದ ಗೂಂಡಾ ವರ್ತನೆ ಆರೋಪವೊಂದು ಕೇಳಿ ಬಂದಿದೆ.

ನಾರಾಯಣಗೌಡ ಅವರ ತಮ್ಮ ಧರ್ಮರಾಜ್ ನನಗೆ ಧಮ್ಕಿ ಹಾಕಿದ್ದಾರೆ ಅಂತ ನಾಗರಾಜ್ ಎಂಬವರು ಗಂಭೀರ ಆರೋಪ ಮಾಡಿದ್ದಾರೆ. ತಡರಾತ್ರಿ 20 ಜನರ ತಂಡ ನನ್ನ ಮನೆ ಬಳಿ ಬಂದು ಗಲಾಟೆ ಮಾಡಿ, ಅವಾಚ್ಯ ಶಬ್ಧಗಳಿಂದ ನಿಂದಸಿ ಹಲ್ಲೆಗೆ ಯತ್ನಿದ್ದಾರೆ. ಇದಕ್ಕೆ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರ ಕುಮ್ಮಕ್ಕು ಇದೆ ಎಂದು ನಾಗರಾಜ್ ಆರೋಪಿಸಿದ್ದಾರೆ.

ಕಳೆದ ಇಪತ್ತು ವರ್ಷಗಳಿಂದ ನಾರಾಯಣಗೌಡ ಬಣದಲ್ಲಿ ರಾಜ್ಯ ಕಾರ್ಯದರ್ಶಿಯಾಗಿದ್ದ ನಾಗರಾಜ್, ಇತ್ತೀಚೆಗೆ ಪ್ರವೀಣ್ ಶೆಟ್ಟಿ ಹುಟ್ಟುಹಬ್ಬಕ್ಕೆ ಶುಭಕೋರಿ ಅಭಿನಂದಿಸಿದ್ರಂತೆ. ಹೀಗಾಗಿ ಗಲಾಟೆ ಮಾಡಿದ್ದಾರೆ ಅಂತ ಆರೋಪಿಸಲಾಗಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಧರ್ಮ, ಕಾರ್ತಿಕ್ ಸೇರಿ ಕೆಲ ಕಾರ್ಯಕರ್ತರ ವಿರುದ್ಧ ನಾಗರಾಜ್ ದೂರು ನೀಡಿದ್ದಾರೆ.

ಈ ಬಗ್ಗೆ ಕರವೇ ಅಧ್ಯಕ್ಷ ನಾರಾಯಣ ಗೌಡ ಪಬ್ಲಿಕ್ ಟಿವಿಗೆ ಜೊತೆ ಮಾತಾನಾಡಿ, ನನಗೂ ಆ ಗಲಾಟೆಗೂ ಯಾವುದೇ ಸಂಭಂದವಿಲ್ಲ. ನಾನು ಯಾರನ್ನು ಕಳುಹಿಸಿಲ್ಲ ನನ್ನ ಮನೆ ಮುಂದೆಯೇ ಕೆಲವರು ರಾತ್ರಿ ಬಂದು ಧಿಕ್ಕಾರ ಕೂಗ್ತಿದ್ರು. ನಾನು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದೇನೆ ಅಂತ ಹೇಳಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv


Leave a Reply