ಆನ್ ಫೀಲ್ಡ್ ನಲ್ಲೇ ಕೊಹ್ಲಿಗೆ ಮುತ್ತು ಕೊಡಲು ಮುಂದಾದ ಅಭಿಮಾನಿ!

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಅಭಿಮಾನಿಯೊಬ್ಬ ನಾಯಕ ವಿರಾಟ್ ಕೊಹ್ಲಿಗೆ ಮುತ್ತು ನೀಡಲು ಯತ್ನಿಸಿದ ಘಟನೆ ನಡೆದಿದೆ.

ಕ್ರೀಡಾಂಗಣದಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆ ಇದ್ದರೂ ಕೂಡ ಸಿಬ್ಬಂದಿಯ ಕಣ್ತಪ್ಪಿಸಿ ಅಭಿಮಾನಿಯೊಬ್ಬ ಪಂದ್ಯದ 15ನೇ ಓವರ್ ವೇಳೆ ಮೈದಾನಕ್ಕೆ ಪ್ರವೇಶ ಮಾಡಿದ್ದ. ಈ ವೇಳೆ ನೇರ ಕೊಹ್ಲಿ ಬಳಿ ತೆರಳಿದ ಆತ ಸೆಲ್ಫಿ ತೆಗೆದುಕೊಂಡಿದ್ದಾನೆ. ಆದರೆ ಬಳಿಕ ಕೊಹ್ಲಿಯನ್ನು ಅಪ್ಪಿಕೊಂಡು ಕಿಸ್ ಮಾಡಲು ಯತ್ನಿಸಿದ್ದು, ಅಭಿಮಾನಿಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://twitter.com/cricketdrug/status/1050659963322818560

ಘಟನೆ ವೇಳೆ ಅಭಿಮಾನಿಯಿಂದ ಅಂತರ ಕಾಯ್ದುಕೊಂಡ ಕೊಹ್ಲಿ ಭದ್ರತಾ ಸಿಬ್ಬಂದಿ ಬರುವವರೆಗೂ ಅಲ್ಲಿಯೇ ನಿಂತಿದ್ದರು. ಇದರಿಂದ ಕೊಹ್ಲಿ ಕೆಲ ಕಾಲ ಮುಜುಗರಕ್ಕೆ ಒಳಗಾಗಿದ್ದರು. ಅಭಿಮಾನಿಯ ಹುಚ್ಚಾಟಕ್ಕೆ ಕೆಲ ಕಾಲ ಆಟ ಮುಂದುವರಿಸಲು ಅಡ್ಡಿ ಉಂಟಾಯಿತು. ಈ ಹಿಂದೆ ರಾಜ್ ಕೋಟ್ ಸೌರಾಷ್ಟ್ರ ಆಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲೂ ಅಭಿಮಾನಿಯೊಬ್ಬ ರಕ್ಷಣಾ ಸಿಬ್ಬಂದಿ ಕಣ್ತಪಿಸಿ ಮೈದಾನ ಪ್ರವೇಶಿಸಿದನ್ನು ನೆನಪಿಸಬಹುದಾಗಿದೆ.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ತಂಡ ಉತ್ತಮ ಆರಂಭ ಪಡೆಯಿತು. ಆದರೆ ಟೀಂ ಇಂಡಿಯಾ ಸ್ಪಿನ್ನರ್ ಗಳು ಮತ್ತೊಮ್ಮೆ ಎದುರಾಳಿ ತಂಡಕ್ಕೆ ಮುಳುವಾದರು. ವಿಂಡೀಸ್ ಬ್ಯಾಟ್ಸ್ ಮನ್‍ಗಳ ಪ್ರಮುಖ 3 ವಿಕೆಟ್ ಉರುಳಿದ ಕುಲ್ದೀಪ್ ಯಾದವ್ ರಿಂದ ಭಾರತ ಮೇಲುಗೈ ಸಾಧಿಸಿದೆ.

ಇತ್ತೀಚಿನ ವರದಿ ಬಂದಾಗ ವಿಂಡೀಸ್ 61.3 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 184 ರನ್ ಗಳಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *