ಕೆಜಿಎಫ್ ಅಖಾಡದಿಂದ ಬಿಗ್ ಬ್ರೇಕಿಂಗ್ ನ್ಯೂಸ್!

-ಡಿಸೆಂಬರ್ ನಲ್ಲಿ ಯಶ್‍ಗೆ ಡಬಲ್ ಧಮಾಕಾ!

ಬೆಂಗಳೂರು: ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ಅಭಿನಿಯದ ‘ಕೆಜಿಎಫ್’ ಸಿನಿಮಾ ಅಡ್ಡದಿಂದ ಒಂದು ಬಿಗ್ ಬ್ರೇಕಿಂಗ್ ಬಂದಿದ್ದು, ನವೆಂಬರ್ 16ಕ್ಕೆ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿತ್ತು. ಆದರೆ ನವೆಂಬರ್  ನಲ್ಲಿ ಕೆಜಿಎಫ್ ತೆರೆಕಾಣುತ್ತಿಲ್ಲ.

ಒಂದು ತಿಂಗಳ ಹಿಂದೆಯೇ ಕೆಜಿಎಫ್ ಸಿನಿಮಾದ ಬಿಡುಗಡೆ ದಿನಾಂಕ ಅಧಿಕೃತವಾಗಿ ಅನೌನ್ಸ್ ಆಗಿತ್ತು. ಆ ಪ್ರಕಾರ ನವೆಂಬರ್ 16ಕ್ಕೆ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಮಾಡುವುದಕ್ಕೆ ಚಿತ್ರ ತಂಡ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಒಂದು ತಿಂಗಳ ಮುಂಚೆ ಟ್ರೇಲರ್ ರಿಲೀಸ್ ಮಾಡಿದ ನಂತರದಲ್ಲಿ ಸಿನಿಮಾ ರಿಲೀಸ್ ಮಾಡುವುದು ತಂಡದ ಪ್ಲಾನ್ ಆಗಿತ್ತು. ಆದರೆ ಕೆಜಿಎಫ್ ಚಿತ್ರದ ಬಿಡುಗಡೆ ದಿನಾಂಕ ಪೋಸ್ಟ್ ಪೋನ್ ಆಗಿದೆ.

ಏಕಕಾಲದಲ್ಲಿ ಕೆಜಿಎಫ್ ಚಿತ್ರವನ್ನ ಸುಮಾರು ಸಾವಿರಕ್ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಬೇಕಿತ್ತು. ಹಿಂದಿಯಲ್ಲಿ ಈಗಾಗಲೇ ಫರಾನ್ ಅಖ್ತರ್ ರಿಲೀಸ್ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ. ಟಿಟೌನ್, ಕೆಟೌನ್‍ನಲ್ಲೂ ಹಂಚಿಕೆ ಹಕ್ಕು ಸೇಲ್ ಆಗಿದೆ. ಹೀಗಿರುವಾಗ ಎಲ್ಲಾ ಕಡೆಯಲ್ಲೂ ಸರಿಯಾದ ಸಮಯ ನೋಡಿಕೊಂಡು ರಿಲೀಸ್ ಮಾಡುವುದು ಚಿತ್ರತಂಡಕ್ಕೆ ಅನಿವಾರ್ಯವಾಗಿತ್ತು.

ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡುವುದಾಗಿದ್ದರೆ ಮುಂಚೆಯೇ ಹೇಳಿದ್ದ ದಿನಾಂಕಕ್ಕೆ ರಿಲೀಸ್ ಮಾಡಲಾಗುತ್ತಿತ್ತು. ಆದರೆ ಈಗ ಡಿಸೆಂಬರ್ ಮೂರನೇ ವಾರಕ್ಕೆ ಸಿನಿಮಾ ಬಿಡುಗಡೆಯನ್ನು ಪೋಸ್ಟ್ ಪೋನ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಹಿಂದೆ ಯಶ್ ಕೆಜಿಎಫ್ ಸಿನಿಮಾ ರಿಲೀಸ್ ಡೇಟ್ ಬಗ್ಗೆ ಮಾತನಾಡಿಲ್ಲ. ಆದರೆ ಡಿಸೆಂಬರ್ ನಲ್ಲಿ ತಾವು ಅಪ್ಪ ಆಗುತ್ತಿರುವ ಖುಷಿ ವ್ಯಕ್ತಪಡಿಸಿದ್ದರು. ಹೀಗಾಗಿ ಯಶ್ ಜೀವನದ ಅತ್ಯಮೂಲ್ಯ ಘಳಿಗೆ ಅಪ್ಪ ಆಗುತ್ತಿರುವುದು. ಈಗ ಡಿಸೆಂಬರ್ ನಲ್ಲಿಯೇ ‘ಕೆಜಿಎಫ್’ ಸಿನಿಮಾ ಬಿಡುಗಡೆಯಾಗುತ್ತಿದೆ. ಇವೆರಡೂ ಯಶ್ ಸಂಭ್ರಮಕ್ಕೆ ಕಾರಣವಾಗಿದ್ದು, ಡಿಸೆಂಬರ್ ತಿಂಗಳಲ್ಲಿ ಯಶ್ ಗೆ ಡಬಲ್ ಸಂಭ್ರಮ ಸಿಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *