ಚಿಕ್ಕೋಡಿ: ಕೆಲವರು ತಮ್ಮ ಹುಟ್ಟು ಹಬ್ಬವನ್ನ ವಿಶೇಷವಾಗಿ ಆಚರಣೆ ಮಾಡಿಕೊಳ್ಳಬೇಕು ಎಂಬ ಬಯಕೆ ಇರುತ್ತದೆ. ಆನಾಥಶ್ರಾಮದಲ್ಲೋ ಇನ್ನೂ ಕೆಲವರು ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಹೋಟೆಲ್ ರೆಸ್ಟೋರೆಂಟ್‍ಗಳಲ್ಲಿ ಆಚರಣೆ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿಯ ಹುಟ್ಟುಹಬ್ಬವನ್ನು ಆತನ ಸ್ನೇಹಿತರು ವಿಚಿತ್ರವಾಗಿ ಆಚರಣೆ ಮಾಡಿದ್ದಾರೆ.

ಬರ್ತ್ ಡೇ ಪಾರ್ಟಿ ಮಾಡಲು ಬಂದಿದ್ದ ಸ್ನೇಹಿತರು ಡಾಬಾದಲ್ಲಿನ ನಿರುಪಯುಕ್ತ ಕಸವನ್ನು ಯುವಕ ಮೇಲೆ ಸುರಿದು ಸಂಭ್ರಮಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣ ಶಿರಕೋಳಿ ಮೆಡಿಕಲ್ ಕಾಲೇಜಿನ ಬಿಎಚ್‍ಎಂಎಸ್ ಓದುತ್ತಿರುವ ವಿದ್ಯಾರ್ಥಿಗಳ ಗುಂಪು ಈ ರೀತಿಯಾಗಿ ವಿಚಿತ್ರವಾಗಿ ಆಚರಣೆ ಮಾಡಿಕೊಂಡಿದೆ.

ಮನೋಜ್ ಕುಮಾರ್ ನ ಮೈ ಮೇಲೆ ಅಡುಗೆ ಎಣ್ಣೆ, ಮೊಟ್ಟೆ, ಮೊಸರು, ಹಿಟ್ಟು ಸೇರಿದಂತೆ ವಿವಿಧ ವಸ್ತುಗಳನ್ನ ಹಾಕಿ ವಿಚಿತ್ರ ಬರ್ತ್ ಡೇ ಆಚರಿಸಿರುವ ಈ ವಿಡಿಯೋ ಈಗ ಫುಲ್ ವೈರಲ್ ಆಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv


Leave a Reply