ಇಬ್ಬರು ಭ್ರಷ್ಟ ಅಧಿಕಾರಿಗಳ ಬಳಿಯಿದೆ ಕೋಟ್ಯಂತರ ಆಸ್ತಿ: ಯಾರ ಬಳಿ ಎಷ್ಟು ಆಸ್ತಿ?

ಬೆಂಗಳೂರು: ಬೆಳ್ಳಂಬೆಳಗ್ಗೆ ಎಸಿಬಿ ದಾಳಿ ನಡೆಸಿ ಎರಡು ಭಾರೀ ತಿಮಿಂಗಿಲಗಳಿಗೆ ಗಾಳ ಹಾಕಿದೆ. ಮಲ್ಲೇಶ್ವರಂನ ಮಂತ್ರಿ ಗ್ರೀನ್ಸ್ ಅಪಾರ್ಟ್‍ಮೆಂಟ್‍ನಲ್ಲಿರುವ ಕೆಐಎಡಿಬಿಯ ಚೀಫ್ ಎಂಜಿನಿಯರ್ ಟಿ.ಆರ್.ಸ್ವಾಮಿ ಹಾಗೂ ಬಿಡಿಎ ಅಧೀಕ್ಷಕ ಅಭಿಯಂತರ ಎನ್.ಜಿ.ಗೌಡಯ್ಯ ಅವರ ಬಸವೇಶ್ವರ ನಗರ ನಿವಾಸದ ಮೇಲೆ ಎಸಿಬಿ ದಾಳಿ ಮಾಡಿದೆ.

ಎಸಿಬಿ ಅಧಿಕಾರಿಗಳು ರೇಡ್ ಮಾಡುವುದನ್ನು ಮೊದಲೇ ತಿಳಿದ ಟಿ ಆರ್ ಸ್ವಾಮಿ ಬಾಗಿಲು ತೆಗೆಯದೇ ಡ್ರಾಮಾ ಮಾಡಿದ್ರು. ಆದ್ರೂ ಪಟ್ಟು ಬಿಡದ ಎಸಿಬಿ ಅಧಿಕಾರಿಗಳು ಬಲವಂತವಾಗಿ ಬಾಗಿಲು ತೆಗೆಸಿ ಪರಿಶೀಲನೆ ನಡೆಸಿದಾಗ ಕೋಟಿ ಕೋಟಿ ದುಡ್ಡು ಸಿಕ್ಕಿದೆ.

ಸ್ವಾಮಿ ಅಪಾರ್ಟ್‍ಮೆಂಟ್‍ನಲ್ಲೇ ಇದ್ದ ಸಹೋದರಿ ಆಟೋ ರಿಕ್ಷಾದಲ್ಲಿ 30 ಲಕ್ಷ ರೂಪಾಯಿ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಎಸ್.ಜಿ. ಗೌಡಯ್ಯ ಮನೆ ಹಾಗೂ ಕಚೇರಿ ಮೇಲೂ ದಾಳಿ ನಡೆಸಿದಾಗ ಕೋಟ್ಯಾಂತರ ರೂಪಾಯಿ ನಗದು ಹಾಗೂ ಅಕ್ರಮ ಆಸ್ತಿ ಕೂಡ ಸಿಕ್ಕಿದೆ.

ಯಾರ ಮನೆಯಲ್ಲಿ ಏನು ಸಿಕ್ಕಿದೆ?
ಎನ್.ಜಿ ಗೌಡಯ್ಯ : ತನ್ನ ಮತ್ತು ಕುಟುಂಬಸ್ಥರ ಹೆಸರಿನಲ್ಲಿ 2 ಮನೆ, 8 ನಿವೇಶನಗಳು, 14 ಅರ್ಪಾಟ್‍ಮೆಂಟ್, ಚಿನ್ನ 3 ಕೆಜಿ,  10 ಕೆಜಿ ಬೆಳ್ಳಿ, 3 ಕಾರು, 3 ದ್ವಿಚಕ್ರ ವಾಹನಗಳು, 1.5 ಕೋಟಿ ರೂ. ಹಾಗೂ ವಿವಿಧ ಬ್ಯಾಂಕಗಳಲ್ಲಿ ಠೇವಣಿಗಳು, ಮಾವನವರ ಮನೆಯಲ್ಲಿ 4.5 ಕೆಜಿ ಚಿನ್ನಾಭರಣ ಸಿಕ್ಕಿದೆ.

ಸ್ವಾಮಿ.ಟಿ.ಆರ್: ಕುಟುಂಬಸ್ಥರ  ಮತ್ತು ಸಂಬಂಧಿಕರ ಹೆಸರಿನಲ್ಲಿ 8 ಮನೆ, 10 ನಿವೇಶನಗಳು, ವಿವಿಧೆಡೆ 10 ಎಕರೆ ಕೃಷಿ ಜಮೀನು, 1.6 ಕೆಜಿ ಚಿನ್ನ, 3 ಕಾರು, 4.52 ಕೋಟಿ ರೂ ಪತ್ತೆಯಾಗಿದೆ.

Comments

Leave a Reply

Your email address will not be published. Required fields are marked *