ಪತ್ನಿ ಇರುವಾಗ ಮತ್ತೊಂದು ಮದ್ವೆಯಾದ- ಮನೆಗೆ ನುಗ್ಗಿ 2ನೇ ಪತ್ನಿಗೆ ಮೊದಲನೇ ಹೆಂಡ್ತಿಯಿಂದ ತರಾಟೆ

ಹಾವೇರಿ: ತಾನು ಇರುವಾಗಲೇ ಮತ್ತೊಂದು ಮದುವೆಯಾದ ಗಂಡನ ಮನೆ ನುಗ್ಗಿ, 2ನೇ ಪತ್ನಿ ಹಾಗೂ ಆಕೆಯ ಕುಟುಂಬಸ್ಥರನ್ನು ತರಾಟೆಗೆ ಮೊದಲ ಪತ್ನಿ ತೆಗೆದುಕೊಂಡ ಘಟನೆ ಹಾವೇರಿಯ ನಾಗೇಂದ್ರಮಟ್ಟಿಯಲ್ಲಿ ನಡೆದಿದೆ.

ಮೊದಲ ಪತ್ನಿ ದ್ಯಾಮಕ್ಕ ಮಂಟೂರ ಮನೆ ಆಗಮಿಸಿ ಪತಿ ಚಂದ್ರಶೇಖರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಮೊದಲ ಪತ್ನಿ ಮನೆಗೆ ಎಂಟ್ರಿ ಕೊಟ್ಟ ವೇಳೆ ಪತಿ ಚಂದ್ರಶೇಖರ್ ಮನೆಯಲ್ಲಿ ಇರಲಿಲ್ಲ. ಈ ವೇಳೆ ಕುಟುಂಬ ಸದಸ್ಯರನ್ನು ಮೊದಲ ಪತ್ನಿ ದ್ಯಾಮಕ್ಕ ತರಾಟೆಗೆ ತೆಗೆದುಕೊಂಡಿದ್ದಾಳೆ.

ಕೌಟುಂಬಿಕ ಕಾರಣ ಹೇಳಿ ವಿಚ್ಛೇದನ ಪಡೆಯಲು ಚಂದ್ರಶೇಖರ್ ಅರ್ಜಿಯನ್ನು ಸಲ್ಲಿಸಿದ್ದಾನೆ. ಆದರೆ ಪ್ರಕರಣ ಕೋರ್ಟಿನಲ್ಲಿ ಇರುವಾಗಲೇ ಚಂದ್ರಶೇಖರ್ ಕದ್ದುಮಚ್ಚಿ ಮದುವೆಯಾಗಿದ್ದಾನೆ. ನನಗೆ ನನ್ನ ಗಂಡ ಬೇಕು, ನನಗೆ ನ್ಯಾಯ ಕೊಡಿಸಿ ಎಂದು ಮೊದಲ ಪತ್ನಿ ದ್ಯಾಮಕ್ಕ ಹೇಳಿದ್ದಾಳೆ.

ಆದರೆ ದ್ಯಾಮಕ್ಕನ ಅತ್ತೆ ಮಾತ್ರ ನಾವು ಮದುವೆ ಮಾಡಿಲ್ಲ ಎಂದು ಸಬೂಬು ನೀಡುತ್ತಿದ್ದಾಳೆ. ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ತನ್ನ ಗಂಡ ಎರಡನೇ ಮದುವೆ ಆಗಿದ್ದಾನೆ ಎಂದು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲು ದ್ಯಾಮಕ್ಕ ಠಾಣೆಯ ಮೆಟ್ಟಿಲೇರಿದ್ದಾಳೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *