ವಿದ್ಯಾರ್ಥಿಗಳ ಎದುರೇ ಶಿಕ್ಷಕನಿಗೆ ಗುಂಡಿಟ್ಟು ಕೊಲೆ!

ನವದೆಹಲಿ: ವಿದ್ಯಾರ್ಥಿಗಳ ಎದುರೇ ಶಿಕ್ಷಕರೊಬ್ಬರನ್ನು ಹಾಡಹಗಲೇ ಗುಂಡಿಕ್ಕಿ ಕೊಲೆಗೈದ ಘಟನೆ ಸೋಮವಾರ ನಡೆದಿದೆ.

31 ವರ್ಷದ ಅಂಕಿತ್ ಗುಂಡಿಗೆ ಬಲಿಯಾದ ಶಿಕ್ಷಕ. ಈ ಘಟನೆ ದೆಹಲಿಯ ಮಹೇಂದ್ರ ಪಾರ್ಕ್ ಟ್ಯೂಷನ್ ಸೆಂಟರ್ ಬಳಿ ನಿನ್ನೆ ಬೆಳಗ್ಗೆ 8:30 ಗಂಟೆ ಸುಮಾರಿಗೆ ನಡೆದಿದೆ.

ಕೊಲೆ ಮಾಡಿದ್ದು ಯಾಕೆ?:
ಶಿಕ್ಷಕ ಅಂಕಿತ್ ಮುಸ್ಲಿಂ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಮದುವೆಯಾಗಲು ನಿರ್ಧರಿಸಿದ್ದರು. ಆದ್ರೆ ಶಿಕ್ಷಕ ಬೇರೆ ಧರ್ಮಕ್ಕೆ ಸೇರಿದವನು ಎಂದು ಯುವತಿಯ ಸಹೋದರ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದನು.

ಸೋಮವಾರ ಅಂಕಿತ್ ಟ್ಯೂಷನ್ ಬಳಿ ಮುಖಕ್ಕೆ ಮಾಸ್ಕ್ ಹಾಕಿಕೊಂಡ ಬಂದ ವ್ಯಕ್ತಿಯೊಬ್ಬ ಹಲ್ಲೆ ಮಾಡಿ ಬಳಿಕ ಇಬ್ಬರು ವಿದ್ಯಾರ್ಥಿಗಳ ಮುಂದೇ ಶೂಟ್ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. `ನಮ್ಮ ಅಣ್ಣ ಮತ್ತು ಯುವತಿಯ ಸಂಬಂಧ ಇಷ್ಟವಿರಲಿಲ್ಲ. ಆದ್ದರಿಂದ ಆಕೆಯ ಅಣ್ಣನೇ ಕೊಲೆ ಮಾಡಿದ್ದಾನೆ ಎಂದು ಅಂಕಿತ್ ಸಹೋದರಿ ಆರೋಪಿಸಿದ್ದಾರೆ.

ಯಾವ ಉದ್ದೇಶದಿಂದ ಈ ಕೊಲೆಯಾಗಿದೆ ಎಂಬುದು ಖಚಿತವಾಗಿಲ್ಲ. ಸದ್ಯಕ್ಕೆ ಅಂಕಿತ್ ಮೃತದೇಹವನ್ನು ಸ್ಥಳೀಯ ಶವಾಗಾರಕ್ಕೆ ತೆಗೆದುಕೊಂಡು ಹೋಗಲಾಗಿದ್ದು, ಬಳಿಕ ದೇಹವನ್ನು ಅಂತಿಮ ವಿಧಾನಗಳಿಗಾಗಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಡಿಸಿಪಿ ಅಸ್ಲಾಂ ಖಾನ್ ಹೇಳಿದ್ದಾರೆ.

ಸದ್ಯ ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡು, ಯುವತಿ ಕುಟುಂಬದ ಒಂಬತ್ತು ಮಂದಿ ಸದಸ್ಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *