ರಿವೀಲ್ ಆಯ್ತು ದೇವದಾಸ್ ಚಿತ್ರದ ರಶ್ಮಿಕಾ ಪಾತ್ರ

ಬೆಂಗಳೂರು: ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿರುವ ಕಿರಿಕ್ ಬೆಡಗಿ ರಶ್ಮಿಕಾ ಇದೀಗ ದೇವದಾಸ್ ಸಿನಿಮಾದಲ್ಲಿ ಖಾಕಿ ಡ್ರೆಸ್‍ನಲ್ಲಿ ಮಿಂಚಿದ್ದಾರೆ.

ರಶ್ಮಿಕಾ ಗೀತಾ ಗೋವಿಂದಂನಲ್ಲಿ ಅಭಿನಯಿಸುವ ಮೂಲಕ ಅಭಿಮಾನಿಗಳ ಸಾಗರವನ್ನೇ ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೇ ರಶ್ಮಿಕಾ ಇದುವರೆಗೂ ಕಾಲೇಜ್ ಹುಡುಗಿ, ಮಾಡರ್ನ್ ಡ್ರೆಸ್‍ನಲ್ಲಿ ಅಭಿಮಾನಿಗಳನ್ನು ಸೆಳೆದಿದ್ದರು. ಇದೀಗ ದೇವದಾಸ್ ಸಿನಿಮಾದಲ್ಲೂ ಖಾಕಿ ಡ್ರೆಸ್‍ನಲ್ಲಿ ತಮ್ಮ ಖದರ್ ಅನ್ನು ತೋರಿಸಿದ್ದಾರೆ.

ದೇವದಾಸ್ ಸಿನಿಮಾದಲ್ಲಿ ರಶ್ಮಿಕಾ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಖಾಕಿ ತೊಟ್ಟಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಹಾಗೇ ವೈರಲ್ ಆಗುತ್ತಿದೆ.

ಗುರುವಾರ ದೇವದಾಸ್ ಸಿನಿಮಾ ಬಿಡುಗಡೆಯಾಗಿದ್ದು, ನಾಗಾರ್ಜುನ್ ದೇವದಾಸ್ ಸಿನಿಮಾದಲ್ಲಿ ನಾನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದಾರೆ. ಈ ಮೂಲಕ ಟಾಲಿವುಡ್‍ನಲ್ಲಿ ಹ್ಯಾಟ್ರಿಕ್ ಗೆಲುವನ್ನು ತಮ್ಮದಾಗಿಸಿಕೊಳ್ಳವ ಹಂಬಲದಲ್ಲಿದ್ದಾರೆ.

ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಕಾರು ಅಪಘಾತವಾದ ಹಿನ್ನೆಲೆಯಲ್ಲಿ ಸಿನಿಮಾ ತಡವಾಗಿ ಬಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *