ಬೆಂಗಳೂರು: ಅಂಗಡಿಗೆ ಹೋಗಿದ್ದ ಒಂದನೇ ತರಗತಿ ಓದುತ್ತಿರುವ ಬಾಲಕಿ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ, ಗಂಭೀರ ಗಾಯಗೊಳಿಸಿರುವಂತಹ ಘಟನೆ ಹೊಸಕೋಟೆ ಗೌತಮ್ ಕಾಲೋನಿಯಲ್ಲಿ ನಡೆದಿದೆ.
ಮಾನಸ ದಾಳಿಗೆ ಒಳಗಾದ ಬಾಲಕಿ. ಹೊಸಕೋಟೆಯ ಓಂ ಶ್ರೀ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿರುವ ಮಾನಸ ಎಂದಿನಂತೆ ಮಂಗಳವಾರ ಬೆಳಗ್ಗೆ ಶಾಲೆಗೆ ಬಂದು ಪರೀಕ್ಷೆ ಮುಗಿಸಿ ಹತ್ತಿರದ ಅಂಗಡಿಗೆ ತಿಂಡಿ ತರಲು ಹೋಗಿದ್ದಾಳೆ. ಇದೇ ವೇಳೆ ಅಲ್ಲಿದಂತಹ ಬೀದಿ ನಾಯಿಗಳು ದಾಳಿ ನಡೆಸಿ ಮಾನಸಾಳ ತೊಡೆ ಸೇರಿದಂತೆ ದೇಹದ ನಾನಾ ಕಡೆ ಮನಬಂದಂತೆ ಕಚ್ಚಿವೆ. ಇದನ್ನು ಓದಿ: ಬೀದಿ ನಾಯಿಗಳ ದಾಳಿಗೆ ತುತ್ತಾಗಿದ್ದ ಬಾಲಕನ ಸಾವು

ಗಂಭೀರವಾಗಿ ಗಾಯಗೊಂಡ ಮಾನಸಾಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಈಗ ದಾಖಲು ಮಾಡಲಾಗಿದೆ. ಹೊಸಕೋಟೆ ನಿವಾಸಿಗಳು ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆ ಕಡಿವಾಣ ಹಾಕಿಲ್ಲ. ಇನ್ನಾದರೂ ಈ ಪ್ರಕರಣದಿಂದ ಎಚ್ಚೆತ್ತು ನಗರಸಭೆ ಬೀದಿನಾಯಿಗಳ ನಿಯಂತ್ರಣಕ್ಕೆ ಕಡಿವಾಣ ಹಾಕಬೇಕಿದೆ. ಇದನ್ನು ಓದಿ: ಪುರಸಭೆ ಸಿಬ್ಬಂದಿಯನ್ನ ಕಚ್ಚಿ ಗಾಯಗೊಳಿಸಿದ ಬೀದಿ ನಾಯಿಗಳು
ಸಿಲಿಕಾನ್ ಸಿಟಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ಈ ಹಿಂದೆ ಶೌಚಾಲಯಕ್ಕೆ ಹೋಗಿದ್ದ ಬಾಲಕನ ಮೇಲೆ 10 ಕ್ಕೂ ಹೆಚ್ಚು ನಾಯಿಗಳು ದಾಳಿ ಮಾಡಿ ಗಾಯಗೊಳಿಸಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply