ದೇವರಾಜ್, ಪ್ರಜ್ವಲ್ ದೇವರಾಜ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ಮೈಸೂರು: ಕಾರು ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ ದೇವರಾಜ್ ಮತ್ತು ಪುತ್ರ ಪ್ರಜ್ವಲ್ ದೇವರಾಜ್ ಮಂಗಳವಾರ ಡಿಸ್ಚಾರ್ಜ್ ಆಗಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಜ್ವಲ್ ದೇವರಾಜ್ ಅವರು, ದರ್ಶನ್ ಕೈಗೆ ಗಾಯಗಳಾಗಿ ಒಂದಷ್ಟು ಸ್ಟಿಚ್ ಹಾಕಿದ್ದಾರೆ. ನಿಯಂತ್ರಣಕ್ಕೆ ಸಿಗದ ಕಾರಣ ಕಾರು ಅಪಘಾತವಾಗಿದೆ. ನಮಗೆಲ್ಲ ಸಣ್ಣಪುಟ್ಟ ಗಾಯಗಳಾಗಿದ್ದು ಎಲ್ಲರೂ ಚೇತರಿಸಿಕೊಳ್ಳುತ್ತಿದ್ದೇವೆ. ನಮ್ಮ ಮೇಲೆ ಪ್ರೀತಿ ತೋರಿದ ಎಲ್ಲ ಅಭಿಮಾನಿಗಳಿಗೂ ಧನ್ಯವಾದಗಳು. ನೀವೆಲ್ಲ ಆತಂಕ ಪಡುವ ಅಗತ್ಯವಿಲ್ಲ. ನಾವು ಶೀಘ್ರದಲ್ಲೇ ಮತ್ತೆ ಶೂಟಿಂಗ್‍ಗೆ ತೆರಳುತ್ತೇವೆ ಎಂದು ಹೇಳಿದರು.

ಹಿರಿಯ ನಟ ದೇವರಾಜ್ ಮಾತನಾಡಿ, ನನ್ನ ಹುಟ್ಟುಹಬ್ಬ ಇತ್ತು. ಹೀಗಾಗಿ ಸ್ನೇಹಿತರೊಬ್ಬರು ಕೇಕ್ ಕತ್ತರಿಸಲು ಮನೆಗೆ ಕರೆದಿದ್ದರು. ಅದಕ್ಕಾಗಿ ಹೋಗಿದ್ದೇವು. ಬರುವಾಗ ಅಪಘಾತವಾಗಿದ್ದು, ಅದೊಂದು ಸಣ್ಣ ಆಕ್ಸಿಡೆಂಟ್ ಯಾರಿಗೆ ಏನೂ ಆಗಿಲ್ಲ. ಕಾರು ಚಲಿಸುತ್ತಿದ್ದವರು ಸೇರಿದಂತೆ ಎಲ್ಲರೂ ಸೇಫ್ ಆಗಿದ್ದೇವೆ. ಕೈ ಬೆರಳು ಹೊರತುಪಡಿಸಿ ಬೇರೆ ಯಾವುದೇ ಗಾಯವಾಗಿಲ್ಲ. ಕೆಲವೇ ದಿನಗಳಲ್ಲಿ ಚೇತರಿಸಿಕೊಳ್ಳುತ್ತೇನೆ. ನಂತರ ಯಥಾಪ್ರಕಾರ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *