ದರ್ಶನ್ ಕಾರು ಅಪಘಾತ ಪ್ರಕರಣಕ್ಕೆ ಸಿಕ್ತು ಬಿಗ್ ಟ್ವಿಸ್ಟ್- ಸ್ನೇಹಿತನ ವಿರುದ್ಧವೇ ದೂರು ಕೊಡಿಸಿದ ದಾಸ

ಮೈಸೂರು: ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇಫ್ ಆಗಿದ್ದು, ತನ್ನ ಸ್ನೇಹಿತನ ವಿರುದ್ಧವೇ ದೂರು ದಾಖಲಿಸಿದ್ದಾರೆ.

ಪ್ರಕರಣದಲ್ಲಿ ರಾಯ್ ಆಂತೋನಿ ಮಾತ್ರ ಏಕೈಕ ಆರೋಪಿಯಾಗಿದ್ದು, ಸ್ನೇಹಿತನ ವಿರುದ್ಧವೇ ದರ್ಶನ್ ಖಾಸಗಿ ಗನ್‍ಮ್ಯಾನ್ ಮತ್ತು ಡ್ರೈವರ್ ಆಗಿರುವ ಲಕ್ಷ್ಮಣ್ ಮೂಲಕ ದೂರು ಕೊಡಿಸಿದ್ದಾರೆ. ಲಕ್ಷ್ಮಣ್ ನೀಡಿದ ದೂರಿನ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ದರ್ಶನ್ ಅಪಘಾತವಾಗಿದ್ದ ಕಾರ್ ಮಿಸ್ಸಿಂಗ್ ಸ್ಟೋರಿಯ ಇನ್‍ಸೈಡ್ ಸ್ಟೋರಿ ಇಲ್ಲಿದೆ

ದೂರಿನಲ್ಲಿ ಏನಿದೆ?
ಸೋಮವಾರ ಬೆಳಗ್ಗಿನ ಜಾವ ಸುಮಾರು 2.30 ಗಂಟೆ ಕಾರಿನ ಚಾಲಕ ರಾಯ್ ಆಂಟೋನಿ ಅವರು ಕಾರಿನಲ್ಲಿ ನಟರಾದ ದರ್ಶನ್, ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಅವರನ್ನು ಕೂರಿಸಿಕೊಂಡು ರಿಂಗ್ ರಸ್ತೆ ಜಂಕ್ಷನ್ ತಿರುವಿನಲ್ಲಿ ಕಾರನ್ನು ನಿರ್ಲಕ್ಷ್ಯತೆ ಚಾಲನೆ ಮಾಡಿಕೊಂಡು ಬರುತ್ತಿದ್ದರು. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು, ಇದರಿಂದ ದರ್ಶನ್ ಅವರ ಬಲಗೈ ಮೂಳೆ ಮುರಿದಿದೆ. ಅಲ್ಲದೇ ದೇವರಾಜ್ ಅವರ ಎದೆಯ ಭಾಗ ಹಾಗೂ ಎಡಗೈ ಬೆರಳಿಗೆ ಪೆಟ್ಟಾಗಿದ್ದು, ಪ್ರಜ್ವಲ್ ಅವರಿಗೆ ಸಣ್ಣಪುಟ್ಟ ಪೆಟ್ಟಾಗಿದೆ.  ಇದನ್ನೂ ಓದಿ: ಬಲಗೈಗೆ ರಾಡ್ ಅಳವಡಿಸಿ 24 ಹೊಲಿಗೆ- ಯಜಮಾನನ ಶಸ್ತ್ರಚಿಕಿತ್ಸೆ ಯಶಸ್ವಿ

ಸದ್ಯ ಮೂವರು ನಟರು ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅಪಘಾತದ ವಿಚಾರ ತಿಳಿದು ನಾನು ಆಸ್ಪತ್ರೆಗೆ ಬಂದು ಗಾಯಗೊಂಡಿದ್ದ ನಟರನ್ನು ನೋಡಿದೆ. ಹೀಗಾಗಿ ಈ ಅಪಘಾತಕ್ಕೆ ಕಾರಣನಾದ ಕಾರು ಚಾಲಕ ರಾಯ್ ಆಂಟೋನಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.  ಇದನ್ನೂ ಓದಿ: ದರ್ಶನ್ ಸೇಫ್ ಆಗಿದ್ದು, ಯಾರಾದ್ರು ರೂಮರ್ಸ್ ಹಬ್ಬಿಸಿದ್ರೆ ನಂಬಬೇಡಿ: ಸೃಜನ್ ಲೋಕೇಶ್

ಘಟನೆಯೇನು?:
ಶನಿವಾರ ನಟರಾದ ದರ್ಶನ್, ಸೃಜನ್ ಲೋಕೇಶ್ ಹಾಗೂ ದೇವರಾಜ್ ಕುಟುಂಬ ಮೈಸೂರು ಮೃಗಾಲಯಕ್ಕೆ ತೆರಳಿ ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದರು. ಆ ಬಳಿಕ ಮೈಸೂರಿನಲ್ಲೇ ಉಳಿದುಕೊಂಡು ಸೋಮವಾರ ಮುಂಜಾನೆ ಅಲ್ಲಿಂದ ಹೊರಟಿದ್ದರು. ಹೀಗೆ ಕಾರ್ ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಮೈಸೂರು ಹೊರವಲಯದ ಹಿನಕಲ್ ಬಳಿ ಕಾರ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದರ್ಶನ್ ಅವರ ಬಲಗೈನ ಮೂಳೆ ಮುರಿದಿದ್ದು, ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಬಲಗೈಗೆ ರಾಡ್ ಅಳವಡಿಸಲಾಗಿದ್ದು, 24 ಹೊಲಿಗೆ ಹಾಕಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದರು. ಇದನ್ನೂ ಓದಿ: ವೈದ್ಯರಿಂದ ದರ್ಶನ್, ದೇವರಾಜ್ X-RAY ಬಿಡುಗಡೆ: ಎಲ್ಲೆಲ್ಲಿ ಗಾಯವಾಗಿದೆ?

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *