ಮಡಿಕೇರಿ: 4ನೇ ತರಗತಿ ವಿದ್ಯಾರ್ಥಿನಿಗೆ ಕ್ಲಾಸ್ ಟೀಚರ್ ಮನಸ್ಸೋ ಇಚ್ಛೆ ಥಳಿಸಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪದ ಉದ್ಘಮ್ ಶಾಲೆಯಲ್ಲಿ ನಡೆದಿದೆ.
ಕುಶಾಲನಗರದ ನಿವಾಸಿ ಜನಿಪೊಳ್ ಎಂಬವರ ಮಗಳು ಕ್ಲಾಸಿನಲ್ಲಿ ತನ್ನ ಗೆಳೆಯರೊಂದಿಗೆ ಪೆನ್ನು ಕೇಳಿದ ಕಾರಣಕ್ಕೆ ಶಿಕ್ಷಕಿ ಮನಬಂದಂತೆ ಥಳಿಸಿದ್ದಾಳೆ. ಕಳೆದ ನಾಲ್ಕು ದಿನಗಳ ಹಿಂದೆ ನಡೆದಿರುವ ಘಟನೆ ಇದಾಗಿದ್ದು, ಸದ್ಯ ಶಿಕ್ಷಕಿ ವಿರುದ್ಧ ವಿದ್ಯಾರ್ಥಿನಿಯ ಪೋಷಕರು ಮಕ್ಕಳ ಆಯೋಗಕ್ಕೆ ದೂರು ನೀಡಿದ್ದಾರೆ.

ಶಿಕ್ಷಕಿಯ ಥಳಿತದಿಂದ ವಿದ್ಯಾರ್ಥಿನಿಯ ಕಾಲು ಊದಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇದಕ್ಕೂ ಮೊದಲು ವಿದ್ಯಾರ್ಥಿನಿಗೆ ಮೂರು ಬಾರಿ ಶಿಕ್ಷಕಿ ಥಳಿಸಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಪೋಷಕರಿಗೆ ಶಾಲಾ ಸಿಬ್ಬಂದಿ ಧಮ್ಕಿ ಹಾಕಿದ್ದರು ಎನ್ನಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv


Leave a Reply