ದರ್ಶನ್ ಕಾರ್ ಅಪಘಾತದ ಬಗ್ಗೆ ನಿರ್ಮಾಪಕ ಸಂದೇಶ್ ನಾಗರಾಜ್ ಹೀಗಂದ್ರು

-ಸ್ನೇಹಿತ ಸೃಜನ್ ಆಸ್ಪತ್ರೆಗೆ ಭೇಟಿ

ಮೈಸೂರು: ಇಂದು ಬೆಳಗ್ಗೆ ನಟ ದರ್ಶನ್ ಕಾರ್ ಅಪಘಾತಕ್ಕೊಳಗಾಗಿದ್ದು, ಸದ್ಯ ಚಾಲೆಂಜಿಂಗ್ ಸ್ಟಾರ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಪಘಾತದ ಬಗ್ಗೆ ನಿರ್ಮಾಪಕ ಸಂದೇಶ್ ನಾಗರಾಜ್ ಅವರು ಪ್ರತಿಕ್ರಿಯಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಂದೇಶ್, ಭಾನುವಾರ ಬೆಳಗ್ಗೆ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿ ಬಳಿಕ ಅರಮನೆಯ ಮಾವುತರಿಗೆ ಊಟ ಹಾಕಿದ್ದು, ಇದರಿಂದ ಒಳ್ಳೆದಾಗಿದೆ. ದರ್ಶನ್ ಅವರ ಪ್ರಾಣಕ್ಕೆ ಏನೂ ತೊಂದರೆ ಇಲ್ಲ. ಭಾನುವಾರ ರಾತ್ರಿ ಆಪ್ತರ ಮನೆಗೆ ಊಟಕ್ಕೆಂದು ದರ್ಶನ್ ಹೋಗಿದ್ದರು. ಅಲ್ಲಿ ಊಟ ಮುಗಿಸಿಕೊಂಡು ಕಾರಿನಲ್ಲಿ ಒಟ್ಟಿಗೆ ವಿಜಯನಗರದ ಕಡೆಗೆ ಬರುತ್ತಿದ್ದರು. ಈ ಕಾರಿನಲ್ಲಿ ದೇವರಾಜ್, ಪ್ರಜ್ವಲ್, ದರ್ಶನ್ ಮತ್ತು ಡ್ರೈವರ್ ನಾಲ್ವರು ಪ್ರಯಾಣಿಸುತ್ತಿದ್ದರು. ದರ್ಶನ್ ಡ್ರೈವರ್ ಪಕ್ಕ ಕುಳಿತಿದ್ದು, ದೇವರಾಜ್ ಮತ್ತು ಪುತ್ರ ಹಿಂದೆ ಕುಳಿತುಕೊಂಡಿದ್ದರು. ಮೈಸೂರಿನ ಸರ್ಕಾರಿ ಗೆಸ್ಟ್ ಹೌಸ್ ನಲ್ಲಿ ರಾತ್ರಿ 9ರವರೆಗೂ ಶೂಟಿಂಗ್ ಇತ್ತು. ಬಳಿಕ ನನ್ನನ್ನು ಹೋಟೆಲಿಗೆ ಬಿಟ್ಟು ಹೊರಟಿದ್ದರು ಅಂತಾ ಹೇಳಿದ್ದಾರೆ.

ಅಪಘಾತ ನಡೆದಿದ್ದು ಹೇಗೆ..?
ಈ ವೇಳೆ ಎದುರು ದಿಕ್ಕಿನಿಂದ ಲಾರಿ ಬಂದಿದೆ. ಆಗ ರಾತ್ರಿ ಮಳೆ ಬರುತ್ತಿತ್ತು. ಪರಿಣಾಮ ಪವರ್ ಕೂಡ ಇರದೆ ರಸ್ತೆ ಕೂಡ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಡ್ರೈವರ್ ಕಾರನ್ನು ಎಡಗಡೆಗೆ ಚಲಾಯಿಸಿದ್ದರಿಂದ ಪರಿಣಾಮ ರಸ್ತೆ ಡಿವೈಡರಿಗೆ ಡಿಕ್ಕಿ ಹೊಡೆದಿದೆ. ಅಪಘಾತವಾದಾಗ ದರ್ಶನ್ ಬಲಗೈಯನ್ನು ಮುಂದೆ ಕೊಟ್ಟಿದ್ದಾರೆ. ಆ ಕೈಯಲ್ಲಿ ಬಳೆ (ಕಡಗ) ಹಾಕಿದ್ದರಿಂದ ಮುಂಗೈಗೆ ಗಾಯವಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು ಬಳೆಯನ್ನು ಕಟ್ ಮಾಡಿ ತೆಗೆದು ಚಿಕಿತ್ಸೆ ನೀಡುತ್ತಿದ್ದಾರೆ. ಅದು ಬಿಟ್ಟು ಬೇರೇನು ಸಮಸ್ಯೆಯಾಗಿಲ್ಲ. ದರ್ಶನ್ ಅವರ ಅಭಿಮಾನಿಗಳಿಗೆ ಸ್ವಲ್ಪ ಬೇಸರವಾಗಿದೆ. ಸದ್ಯಕ್ಕೆ ಅವರು ಆರೋಗ್ಯವಾಗಿದ್ದಾರೆ. ವೈದ್ಯರ ಬಳಿ ಮಾತನಾಡಿ ಇಂದೇ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ಆಸ್ಪತ್ರೆಗೆ ನಟ ಸೃಜನ್ ಭೇಟಿ ನೀಡಿದ್ದು, ಅಭಿಮಾನಿಗಳು ಆಸ್ಪತ್ರೆಯ ಮುಂದೆ ಬರುವ ಸಾಧ್ಯತೆ ಇದೆ. ಆದ್ದರಿಂದ ಮುಂಜಾಗೃತ ಕ್ರಮವಾಗಿ ಆಸ್ಪತ್ರೆಯ ಮುಂಭಾಗ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದೊಂದು ಸೆಲ್ಫ್ ಅಪಘಾತವಾಗಿದ್ದರಿಂದ ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ. ಸದ್ಯಕ್ಕೆ ಪೊಲೀಸರು ಈ ಬಗ್ಗೆ ಆಪ್ತರ ಬಳಿ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

https://www.youtube.com/watch?v=5cZhEqTdypo

https://www.youtube.com/watch?v=FFi-X9R8Chw

Comments

Leave a Reply

Your email address will not be published. Required fields are marked *