ವಿಜಯಪುರ: ನನಗೊಂದು ಆಸೆ ಇತ್ತು ಮಂತ್ರಿ ಆಗಬೇಕು ಅಂತ, ಅದು ಆಗಿದೆ. ನಾನು ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇನೊ ನನಗೆ ಗೊತ್ತಿಲ್ಲ. ಹೈಕಮಾಂಡ್ ರಾಜೀನಾಮೆ ಕೊಡಿ ಅಂದ್ರೆ ನಾಳೆನೇ ಕೊಡುತ್ತೀನಿ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಇರುವಷ್ಟರಲ್ಲಿ ಏನು ಸೇವೆ ಮಾಡುತ್ತೇವೆ ಅದು ಮುಖ್ಯ ಎಂದಿದ್ದಾರೆ. ಅಲ್ಲದೆ ನಾನು ಆಪರೇಷನ್ ಕಮಲದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸರ್ಕಾರ ಐದು ವರ್ಷ ಆಡಳಿತ ನಡೆಸುತ್ತೆ. ಮಾಧ್ಯಮಗಳಲ್ಲಿ ಸರ್ಕಾರ ಬಿಳುತ್ತೆ ಅಂತ ಹೇಳುತ್ತಿದ್ದಾರೆ. ಆದರೆ ನಮ್ಮ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ರಾಜಕೀಯದ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಇಲಾಖೆಯಲ್ಲಿ ಕೆಲಸ ಮಾಡುವುದಷ್ಟೇ ನನ್ನ ಆದ್ಯತೆ. ಒಟ್ಟು ಇಲ್ಲಿವರೆಗೆ 1,600 ಎಎನ್ಎಮ್ ಗಳ ನೇಮಕಾತಿ ಆಗಿದೆ. 200 ತಜ್ಞ ವೈದ್ಯರನ್ನು ಹಾಗೂ 300 ಎಂ ಬಿ ಬಿ ಎಸ್ ವೈದ್ಯರ ನೇಮಕಾತಿ ಆಗಿದೆ. 350 ಅಂಬುಲೆನ್ಸ್ ಗಳು ಸಿದ್ಧವಾಗಿದ್ದು, ಇಷ್ಟರಲ್ಲೇ ರಸ್ತೆಗೆ ಇಳಿದು ಸೇವೆ ಸಲ್ಲಿಸಲಿವೆ. ನನ್ನ ಇಲಾಖೆಯಲ್ಲಿ ಕಡಿಮೆ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ರಾಜ್ಯದಲ್ಲಿ ಅರ್ಧಕ್ಕೆ ನಿಂತಿದ್ದ 50 ಆಸ್ಪತ್ರೆ ಕಟ್ಟಡಗಳನ್ನು ಪೂರ್ತಿಗೊಳಿಸಲಾಗಿದೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply