ಠಾಣೆಯಿಂದ ದುನಿಯಾ ವಿಜಿ ಶಿಫ್ಟ್ – ಬ್ಲಡ್ ಸ್ಯಾಂಪಲ್ ಪಡೆದ ಪೊಲೀಸ್ರು

ಬೆಂಗಳೂರು: ಪೊಲೀಸ್ ಠಾಣೆಯಲ್ಲಿ ಜನ ಸೇರುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ನಟ ದುನಿಯಾ ವಿಜಯ್ ಅವರನ್ನು ಹೈಗ್ರೌಂಡ್ ಪೊಲೀಸ್ ಠಾಣೆಯಿಂದ ಬೇರೆ ಕಡೆಗೆ ಶಿಫ್ಟ್ ಮಾಡಲಾಗಿದೆ.

ಪೊಲೀಸರು ಯಾರಿಗೂ ಕಾಣದಂತೆ ವಿಜಿಯನ್ನ ವೈಯಾಲಿಕಾವಲ್ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಇತ್ತ ಹಲ್ಲೆಗೊಳಗಾದ ಮಾರುತಿಗೌಡ ವಿಕ್ರಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ದರಿಂದ ಪಾನಿಪುರಿ ಕಿಟ್ಟಿ ಸಂಗಡಿಗರು ವಿಕ್ರಮ ಆಸ್ಪತ್ರೆಯ ಬಳಿ ಸೇರಿದ್ದಾರೆ. ಇದರಿಂದ ಠಾಣೆಯೆದುರು ಮತ್ತೆ ಜನ ಸೇರುವ ಸಾಧ್ಯತೆ ಇದ್ದು, ಮುಂಜಾಗೃತಾ ಕ್ರಮವಾಗಿ ಪೊಲೀಸ್ ಠಾಣೆಯ ಹಿಂಬಾಗಿಲ ಮೂಲಕ ದುನಿಯಾ ವಿಜಯ್ ಅವರನ್ನು ಪೊಲೀಸರು ಸ್ಥಳಾಂತರಿಸಿದ್ದಾರೆ. ಇದನ್ನೂ ಓದಿ: ಜಂಗ್ಲಿ ಮೇಲಿದೆ ಸಾಲು ಸಾಲು ಪ್ರಕರಣಗಳು!

ವಿಜಿ ಬ್ಲಡ್ ಸ್ಯಾಂಪಲ್:
ದುನಿಯಾ ವಿಜಿ ಗಾಂಜಾ ಹೊಡೆದು ಹಲ್ಲೆ ಮಾಡಿದ್ದಾರೆ ಎಂದು ಹೈಗ್ರೌಂಡ್ಸ್ ಪೊಲೀಸರು ಶಂಕಿಸಿದ್ದಾರೆ. ಆದ್ದರಿಂದ ಬ್ಲಡ್ ಸ್ಯಾಂಪಲ್ ತೆಗೆದುಕೊಂಡು ಎಫ್‍ಎಸ್‍ಎಲ್‍ಗೆ ಪೊಲೀಸರು ಕಳುಹಿಸಿದ್ದಾರೆ. ಒಂದು ವೇಳೆ ಗಾಂಜಾ ಇರುವುದು ಪತ್ತೆಯಾದರೆ ಎನ್‍ಡಿಪಿಎಸ್ ಆಕ್ಟ್ ನಲ್ಲಿ ಮತ್ತೊಂದು ಕೇಸ್ ದಾಖಲಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ದುನಿಯಾ ವಿಜಿ ಹಲ್ಲೆ ಪ್ರಕರಣ: ಜಯಮ್ಮನ ಮಗನಿಗೆ ಜೈಲು..?

ಹೈಗ್ರೌಂಡ್ಸ್ ಸ್ಟೇಷನ್ ನಿಂದ ಕರೆತಂದು ವೈಯಾಲಿಕಾವಲ್ ನಲ್ಲಿ ದುನಿಯಾ ವಿಜಯ್ ಹೇಳಿಕೆ ಪಡೆದುಕೊಳ್ಳುತ್ತಿದ್ದಾರೆ. ನಂತರ ಪೊಲೀಸರು ಬೌರಿಂಗ್ ಆಸ್ಪತ್ರೆಗೆ ದುನಿಯಾ ವಿಜಯ್ ಮೆಡಿಕಲ್ ಟೆಸ್ಟ್ ಗೆ ಕರೆದುಕೊಂಡು ಹೋಗಲಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಜಡ್ಜ್ ಮುಂದೆ ದುನಿಯಾ ವಿಜಯ್ ಹಾಜರುಪಡಿಸಲಿದ್ದು, ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು ನ್ಯಾಯಾಧೀಶರ ಮುಂದೆ ಮನವಿ ಮಾಡುವ ಸಾಧ್ಯತೆ ಇದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

https://www.youtube.com/watch?v=9HevyLtzMc0

Comments

Leave a Reply

Your email address will not be published. Required fields are marked *