ಶಿಮ್ಲಾ: ಟ್ರಾಕ್ ಕ್ರೂಸರ್ ವಾಹನವೊಂದು ರಸ್ತೆ ತಿರುವಿನಲ್ಲಿ ಇಳಿಜಾರು ಗುಂಡಿಗೆ ಬಿದ್ದು, ಮೂವರು ದಂಪತಿಗಳು ಸೇರಿದಂತೆ ಒಟ್ಟು 13 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಿಮಾಚಲ್ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಇಂದು ನಡೆದಿದೆ.
ಮೃತಪಟ್ಟವರನ್ನು ಮತ್ವಾರ್ ಸಿಂಗ್(48), ಅವರ ಪತ್ನಿ ಬಸಂತಿ ದೇವಿ(44), ಮಗ ಮುನೀಶ್(24), ಪ್ರೇಮ್ ಸಿಂಗ್(38), ಅವರ ಪತ್ನಿ ಪೂನಮ್(30), ಅವರ ಮಗಳು ರಿಧೀಮಾ(6), ಅಟ್ಟರ್ ಸಿಂಗ್(44) ಪತ್ನಿ ಮುನ್ನಾ ದೇವಿ(40), ಬಿಟ್ಟು(42), ಬಂಡಿ ದೇವಿ(48), ನೇರ್ ಸಿಂಗ್(35), ಮನೋಜ್(35) ಮತ್ತು ಅನಿಲ್(28) ಎಂದು ಗುರುತಿಸಲಾಗಿದೆ.
ಈ ಘಟನೆ ಕುದ್ದು ರಸ್ತೆಯಿಂದ 3 ಕಿ.ಮೀ ದೂರವಿರುವ ಸ್ವಾರಾದಿಂದ ಟಿಯುನಿಗೆ ಹೋಗುವ ದಾರಿಯಲ್ಲಿ ಸಂಭವಿಸಿದೆ. ಈ ಅವಘಡದಲ್ಲಿ ಟ್ರಕ್ ನಲ್ಲಿದ್ದ 13 ಮಂದಿಯೂ ಸಾವನ್ನಪ್ಪಿದ್ದಾರೆ ಎಂದು ಶಿಮ್ಲಾದ ಪೊಲೀಸ್ ಅಧೀಕ್ಷಕ ಒಮಾಪತಿ ಜಮ್ವಾಲ್ ತಿಳಿಸಿದ್ದಾರೆ.
10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮೂವರು ಗಾಯಾಳುಗಳನ್ನು ರೋಹ್ರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟವರಲ್ಲಿ ಎಂಟು ಮಂದಿ ಮೂರು ಪ್ರತ್ಯೇಕ ಕುಟುಂಬಕ್ಕೆ ಸೇರಿದವರರಾಗಿದ್ದಾರೆ. ಘಟನೆ ನಡೆದ ಕೂಡಲೇ ಜುಬ್ಬಲ್ ಸ್ಟೇಷನ್ ಹೌಸ್ ಆಫೀಸರ್ ಮತ್ತು ಸ್ವಾರಾ ಪೊಲೀಸ್ ಅವರ ನೇತೃತ್ವದಲ್ಲಿ ಸ್ಥಳಕ್ಕೆ ಆಗಮಿಸಿ ಗಾಯಗೊಂಡ ಮೂವರನ್ನು ರೋಹ್ರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಕೂಡ ಮೃತಪಟ್ಟರು ಎಂದು ಜಮ್ವಾಲ್ ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply