ಮಹಿಳೆಯನ್ನು ಅರೆ ಬೆತ್ತಲು ಮಾಡಿ ಥಳಿತ- ಸ್ಥಳದಲ್ಲೇ ಇದ್ರೂ ಪೊಲೀಸರು ಗಪ್ ಚುಪ್!

ವಿಜಯಪುರ: ಮಹಿಳೆಯರ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಈ ವೇಳೆ ಮಹಿಳೆಯೊಬ್ಬರನ್ನು ಅರೆ ಬೆತ್ತಲು ಮಾಡಿ ಚೆನ್ನಾಗಿ ಥಳಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.

ಶುಕ್ರವಾರ ಗಣೇಶ ವಿಸರ್ಜನೆಯ 9ನೇ ದಿನವಾಗಿದ್ದು, ನಗರದಲ್ಲಿ ಮದ್ಯ ಮಾರಟ ನಿಷೇಧಿಸಲಾಗಿತ್ತು. ಕಾರಣ ನಗರದ ಬಾಟರ ಗಲ್ಲಿಯಲ್ಲಿ ಕಳ್ಳಭಟ್ಟಿ ಮಾರಾಟ ಮಾಡುವ ಎರಡು ಗುಂಪುಗಳ ಮಧ್ಯೆ ಗ್ರಾಹಕರಿಗಾಗಿ ಮಾರಾಮಾರಿ ನಡೆದಿದೆ.

ಈ ವೇಳೆ ಎರಡು ಗುಂಪಿನ ಮಹಿಳೆಯರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ನಂತರ ಮಹಿಳೆಯರು ಕೈ-ಕೈ ಮಿಲಾಯಿಸಿದ್ದಾರೆ. ಒಂದು ಗುಂಪಿನ ಮಹಿಳೆಯನ್ನು ಅರೆ ಬೆತ್ತಲು ಮಾಡಿ ಥಳಿಸಿದ್ದಾರೆ. ಇದೇ ವೇಳೆ ಪೊಲೀಸರು ಸ್ಥಳದಲ್ಲಿದ್ದು, ಅವರು ಏನೂ ಮಾಡದೆ ಗಪ್ ಚುಪ್ ಆಗಿ ನಿಂತಿದ್ದರು.

ಶುಕ್ರವಾರ ಸಂಜೆ ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *