ಗುಪ್ತ ನಿರ್ಣಯ ಮಂಡಿಸಿ ಶಾಸಕರಿಂದ ಅಂಗೀಕಾರ ಪಡೆದ ಬಿಎಸ್‍ವೈ

ಬೆಂಗಳೂರು: ಆಪರೇಷನ್ ಕಮಲಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ  ಶಾಸಕರು, ಸಂಸದರ ಸಮ್ಮತಿ ಪಡೆದಂತಿದೆ. ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಬಿಜೆಪಿ ವಿಶೇಷ ಸಭೆಯಲ್ಲಿ ಯಡಿಯೂರಪ್ಪ ಗುಪ್ತ ನಿರ್ಣಯ ಮಂಡಿಸಿ ಅದಕ್ಕೆ ಅಂಗೀಕಾರ ಪಡೆದಿದ್ದಾರೆ.

ವಿಶೇಷ ಅಂದ್ರೆ, ನಿರ್ಣಯ ಏನೆಂದು ಹೇಳದೇ ಸಭೆಯ ಸಮ್ಮತಿಯನ್ನು ಯಡಿಯೂರಪ್ಪ ಪಡೆದಿದ್ದಾರೆ. ನಾನೊಂದು ನಿರ್ಣಯ ಕೈಗೊಂಡಿದ್ದೇನೆ. ಆ ನಿರ್ಣಯ ಒಂದಕ್ಕೆ ನಿಮ್ಮ ಸಹಮತ ಬೇಕು, ಈ ನಿರ್ಣಯಕ್ಕೆ ಕೈ ಎತ್ತಿ ಎಂದು ಯಡಿಯೂರಪ್ಪ ಹೇಳಿದ್ದಾರೆ. ಶಾಸಕರು, ಸಂಸದರು, ಪದಾಧಿಕಾರಿಗಳು ಕೈ ಎತ್ತುವ ಮೂಲಕ ಗುಪ್ತ ನಿರ್ಣಯಕ್ಕೆ ಸಮ್ಮತಿ ಸೂಚಿಸಿದರು.

ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾವುದೇ ಕಾರಣಕ್ಕೂ ಆಪರೇಷನ್ ಮಾಡಲ್ಲ. ಆದ್ರೆ ಸಮ್ಮಿಶ್ರ ಸರ್ಕಾರದಲ್ಲಿ ಕಿತ್ತಾಟ ನಡೆದು ಸರ್ಕಾರ ಪತನವಾದ್ರೆ, ಸರ್ಕಾರ ರಚನೆಗೆ ಮುಂದಾಗುವುದಾಗಿ ಯಡಿಯೂರಪ್ಪ ಸ್ಪಷ್ಪಪಡಿಸಿದ್ದಾರೆ. ಜೊತೆಗೆ ಯಾವುದೇ ಕಾರಣಕ್ಕೂ ಅಮಿಷಗಳಿಗೆ ಬಲಿಯಾಗಬೇಡಿ ಅಂತ ಶಾಸಕರಿಗೆ ತಿಳಿಹೇಳಿದ್ದಾರೆ.

ನಿರ್ಣಯ ಏನೆಂದು ಹೇಳದೇ ಯಡಿಯೂರಪ್ಪ ಒಪ್ಪಿಗೆ ಪಡೆದ ಕಾರಣ ಆಪರೇಷನ್ ಕಮಲಕ್ಕೆ ಒಪ್ಪಿಗೆ ನೀಡಲು ಈ ನಿರ್ಣಯ ಕೈಗೊಂಡಿದ್ದಾರಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=mAQYpkz9G0M

Comments

Leave a Reply

Your email address will not be published. Required fields are marked *