ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ನಟರಾದ ಚಾಲೆಜಿಂಗ್ ಸ್ಟಾರ್ ದರ್ಶನ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕ ಮಹೇಶ್ ಬಾಬು ಇಬ್ಬರು ಸ್ಟಾರ್ ನಟರನ್ನು ಒಂದೇ ಸಿನಿಮಾದಲ್ಲಿ ತೋರಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಸದ್ಯ ಇಬ್ಬರನ್ನು ಒಟ್ಟಿಗೆ ತೋರಿಸುವ ಕೆಲಸದಲ್ಲಿ ಮಹೇಶ್ ಬಾಬು ತೊಡಗಿದ್ದಾರೆ.
ನಿರ್ಮಾಪಕರೊಬ್ಬರು ಮಹೇಶ್ ಬಾಬು ಅವರಿಗೆ ಈ ಅವಕಾಶವನ್ನು ನೀಡಿದ್ದಾರೆ. ಶಿವರಾಜ್‍ಕುಮಾರ್ ಹಾಗೂ ದರ್ಶನ್ ಅವರನ್ನು ಸೇರಿಸಿ ಒಂದು ಸಿನಿಮಾ ಮಾಡಿ ಈ ಸಿನಿಮಾವನ್ನು ನಾನೇ ನಿರ್ಮಿಸುತ್ತಿದ್ದಾರೆ ಎಂದು ನಿರ್ಮಾಪಕರು ಹೇಳಿದ್ದಾರೆ.

ಮಹೇಶ್ ಈಗಾಗಲೇ ದರ್ಶನ್ ಅವರನ್ನು ಸಂಪರ್ಕಿಸಿ ಚಿತ್ರದ ಬಗ್ಗೆ ತಿಳಿಸಿದ್ದಾರೆ. ಅದಕ್ಕೆ ದರ್ಶನ್, ಶಿವಣ್ಣ ಅವರ ಜೊತೆ ನಟಿಸಲು ನನಗೆ ಖುಷಿಯಾಗುತ್ತದೆ. ಆದರೆ ಚಿತ್ರದ ಕಥೆ ಕೇಳಿ ಅಂತಿಮ ನಿರ್ಧಾರವನ್ನು ಹೇಳುತ್ತೇನೆ. ಅಲ್ಲದೇ ಶಿವಣ್ಣ ಒಬ್ಬರು ದೊಡ್ಡ ನಟ ಅವರ ಜೊತೆ ನಟಿಸಬೇಕೆಂದರೆ ಉತ್ತಮ ಕಥೆ ಬೇಕು ಎಂದು ದರ್ಶನ್ ತಿಳಿಸಿದ್ದಾರೆ.
ಸದ್ಯ ಶಿವರಾಜ್‍ಕುಮಾರ್ ಹಾಗೂ ದರ್ಶನ್ ಒಟ್ಟಿಗೆ ನಟಿಸಲು ಒಳ್ಳೆಯ ಸ್ಕ್ರಿಪ್ಟ್ ಬೇಕಾಗಿದೆ. ಚಿತ್ರದ ಕತೆ ರೆಡಿ ಆಗಿ ಇಬ್ಬರಿಗೂ ಸೂಟ್ ಆಗುವ ಕತೆ ಸಿಕ್ಕರೆ ಸಿನಿಮಾ ಅನೌನ್ಸ್ ಆಗಲಿದೆ ಎಂದು ಹೇಳಲಾಗಿದೆ. ಸದ್ಯ ನಿರ್ದೇಶಕ ಮಹೇಶ್ ಬಾಬು ಈ ಹಿಂದೆ ಶಿವಣ್ಣ ನಟನೆಯ ‘ಪರಮೇಶ ಪಾನ್‍ವಾಲ’ ಚಿತ್ರವನ್ನು ನಿರ್ದೇಶಿಸಿದ್ದು, ದರ್ಶನ್ ಅವರ ‘ಅಭಯ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply