ಕಲಬುರಗಿ: ಯುವಕನ ರುಂಡ ಕತ್ತರಿಸಿ ಪರಾರಿಯಾಗಿದ್ದ ಆರೋಪಿಯ ಮೇಲೆ ಪೊಲೀಸರಿಂದ ಫೈರಿಂಗ್ ನಡೆಸಿರುವ ಘಟನೆ ಕಲಬುರಗಿ ಹೊರವಲಯದ ಆಳಂದ ರಸ್ತೆಯ ಕೆರೆಭೋಸ್ಗಾ ಬಳಿ ನಡೆದಿದೆ.
ನಾಗರಾಜ್ ಅಲಿಯಾಸ್ ನಾಗಾ (24) ಎಂಬವನ ಮೇಲೆ ಚೌಕ್ ಠಾಣೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಸೆ 11 ರಂದು ಸಿದ್ದೋಜಿ ಎಂಬಾತನನ್ನ ಅಪಹರಿಸಿ ಅಲಗೋಡ್ ಗ್ರಾಮದ ಬಳಿ ನಾಗರಾಜ್ ರುಂಡ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದನು. ಬಳಿಕ ರುಂಡವನ್ನು ಕೆರೆಭೋಸ್ಗಾದ ನಿರ್ಜನ ಪ್ರದೇಶದಲ್ಲಿ ಬಿಸಾಕಿದ್ದನು. ಖಚಿತ ಮಾಹಿತಿ ಮೇರೆಗೆ ಚೌಕ್ ಠಾಣೆ ಸಿಪಿಐ ಎಸ್ಎಸ್ ಹಿರೇಮಠ್ ನೇತೃತ್ವದಲ್ಲಿ ಬಂಧನಕ್ಕೆ ತೆರಳಿದ್ದರು.

ಈ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದನು. ಆರೋಪಿಯನ್ನು ಬಂಧಿಸುವಾಗ ಪೊಲೀಸ್ ಪೇದೆಗಳಾದ ಸಿದ್ದರಾಜು ಮತ್ತು ರಮೇಶ್ ಎಂಬವರು ಗಾಯಗೊಂಡಿದ್ದು, ಗಾಯಾಳು ಆರೋಪಿಯನ್ನು ಹಾಗು ಪೇದೆಗಳನ್ನು ಜಿಲ್ಲಾಸ್ಪತ್ರಗೆ ದಾಖಲು ಮಾಡಲಾಗಿದೆ.
ಆರೋಪಿ ನಾಗರಾಜ್ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದೋಜಿಯನ್ನ ಅಪಹರಿಸಿದ್ದನು ಎಂದು ಹೇಳಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply