ಮಗು ಸಾವನ್ನಪ್ಪಿದ್ದಕ್ಕೆ ಮನನೊಂದು ಕೆರೆಗೆ ಹಾರಿದ ಬಾಣಂತಿ

ಬಾಗಲಕೋಟೆ: ಮಗು ಮೃತಪಟ್ಟಿದ್ದರಿಂದ ಬಾಣಂತಿಯೊಬ್ಬರು ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಜಮಖಂಡಿ ನಗರದ ಹೊರವಲಯದ ಲಕ್ಕನಕೆರೆಯಲ್ಲಿ ನಡೆದಿದೆ.

23 ವರ್ಷದ ಮಲ್ಲವ್ವ ವಿಭೂತಿ ಕರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಾಣಂತಿ. ಮಲ್ಲವ್ವಗೆ ಒಂದು ತಿಂಗಳ ಹಿಂದೆ ಹೆರಿಗೆಯಾಗಿತ್ತು. ಎರಡು ದಿನಗಳ ನಂತರ ಗಂಡು ಮಗು ಸಾವನ್ನಪ್ಪಿತ್ತು. ಮಗು ಸಾವಿನಿಂದಾಗಿ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಇದರಿಂದ ಮಲ್ಲವ್ವ ಖಿನ್ನತೆಗೊಳಗಾಗಿದ್ದರು ಎಂದು ತಿಳಿದು ಬಂದಿದೆ.

ಶುಕ್ರವಾರ ಮಧ್ಯಾಹ್ನ ಮಲ್ಲವ್ವ ಮನೆಯಿಂದ ಕಾಣೆಯಾಗಿದ್ದರು. ಸಂಜೆಯವರೆಗೂ ಮನೆಯಲ್ಲಿ ತಮಗೆ ಗೊತ್ತಿರುವ ಕಡೆ ಹುಡುಕಾಟ ನಡೆಸಿದ್ದಾರೆ. ಆದರೆ ಏನು ಪ್ರಯೋಜನವಾಗಿಲ್ಲ ಮಲ್ಲವ್ವ ಎಲ್ಲೂ ಪತ್ತೆಯಾಗಿಲ್ಲ. ಬಳಿಕ ಇಂದು ಮುಂಜಾನೆ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ.

ಇಂದು ಲಕ್ಕನಕೆರೆಯಲ್ಲಿ ಮಹಿಳಾ ಮೃತದೇಹ ಮೇಲೆ ತೇಲಿ ಬಂದಿತ್ತು. ಆಗ ಸುತ್ತಮುತ್ತಲಿನ ಜನರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಜಮಖಂಡಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಮೃತ ದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಆಗ ಮಲ್ಲವ್ವ ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಜಮಖಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *