ಯೂಟ್ಯೂಬ್ ಟ್ರೆಂಡಿಂಗ್ 2ರಲ್ಲಿ ಯಶ್ ಸಿನಿಮಾ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಮಾಸ್ಟರ್ ಪೀಸ್’ ಸಿನಿಮಾ ಈಗ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿದ್ದು, ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಮಾಸ್ಟರ್ ಪೀಸ್ ಸಿನಿಮಾ 2015 ಡಿಸೆಂಬರ್ ಕೊನೆಯಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು. ಆದರೆ ಈ ಸಿನಿಮಾವನ್ನು ಅಧಿಕೃತವಾಗಿ ಯೂಟ್ಯೂಬ್  ಗೆ ಸೆಪ್ಟಂಬರ್ 12 ರಂದು ಅಪ್ಲೋಡ್ ಮಾಡಲಾಗಿದೆ. ಇಂದಿಗೆ ಸಿನಿಮಾ ಅಪ್ಲೋಡ್ ಆಗಿ ಮೂರು ದಿನಗಳಾಗಿದೆ. ಆದರೆ ಇಂದಿಗೂ ಮಾಸ್ಟರ್ ಪೀಸ್ ಸಿನಿಮಾ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿದೆ.

ಈಗಾಗಲೇ ಸಿನಿಮಾ 5 ಲಕ್ಷಕ್ಕಿಂತ ಅಧಿಕವಾಗಿ ವ್ಯೂವ್ ಕಂಡಿದ್ದು, 5.7 ಪ್ರೇಕ್ಷಕರು ಮಾಸ್ಟರ್ ಪೀಸ್ ಸಿನಿಮಾವನ್ನು ಲೈಕ್ಸ್ ಮಾಡಿದ್ದಾರೆ. ಮಾಸ್ಟರ್ ಪೀಸ್ ಸಿನಿಮಾ ಬಿಡುಗಡೆಯಾಗಿ ಮೂರು ವರ್ಷಗಳಾದರೂ ಇಂದಿಗೂ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ 2 ನಲ್ಲಿ ಇರುವುದರಿಂದ ಯಶ್ ಹವಾ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ತಿಳಿಯಬಹುದು.

ಮಾಸ್ಟರ್ ಪೀಸ್ ಸಿನಿಮಾ ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಗೊಂಡಿದ್ದು, ನಿರ್ದೇಶಕ ಮಂಜು ಮಾಂಡವ್ಯ ಅವರ ನಿರ್ದೇಶದಲ್ಲಿ ಮೂಡಿಬಂದಿತ್ತು. ಈ ಸಿನಿಮಾದಲ್ಲಿ ಮೊದಲ ಬಾರಿಗೆ ಸಾನ್ವಿ ಶ್ರೀವಾಸ್ತವ್ ಅವರು ಯಶ್ ಗೆ ನಾಯಕಿಯಾಗಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ಯಶ್ ಭಗತ್ ಸಿಂಗ್ ಲುಕ್ ನಲ್ಲಿ ಮಿಂಚಿದ್ದರು. ರವಿಶಂಕರ್, ಚಿಕ್ಕಣ್ಣ, ಹಿರಿಯ ನಟಿ ಸುಹಾಸಿನಿ ಸೇರಿದಂತೆ ತಾರಾಬಳಗವೆ ಈ ಸಿನಿಮಾದಲ್ಲಿತ್ತು.

ಸದ್ಯಕ್ಕೆ ಯಶ್ ಅವರು ಬಹುನಿರೀಕ್ಷಿತ ‘ಕೆಜಿಎಫ್’ ಸಿನಿಮಾ ಶೂಟಿಂಗ್ ಮುಗಿಸಿದ್ದು, ‘ಮೈ ನೇಮ್ ಇಸ್ ಕಿರಾತಕ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಕ್ರವರ್ತಿ ಚಿತ್ರದ ಹಿಂದಿ ಡಬ್ಬಿಂಗ್ ವರ್ಷನ್ ಇದೇ ತಿಂಗಳ ಮೂರನೇ ತಾರೀಕಿನಂದು ಯೂಟ್ಯೂಬಿನಲ್ಲಿ ಬಿಡುಗಡೆಯಾಗಿತ್ತು. ಅದು ಬಿಡುಗಡೆಯಾದ ಕ್ಷಣದಿಂದಲೇ ಯಾವ ಥರದಲ್ಲಿ ಕ್ರೇಜ್ ಸೃಷ್ಟಿಯಾಗಿತ್ತೆಂದರೆ ಎರಡು ದಿನ ಕಳೆಯೋದರೊಳಗೆ ಏಳು ಮಿಲಿಯನ್‍ಗೂ ಅಧಿಕ ಜನ ಅದನ್ನು ವೀಕ್ಷಿಸಿದ್ದಾರೆ. ಒಟ್ಟಾರೆ ಚಿತ್ರದ ಬಗ್ಗೆ, ದರ್ಶನ್ ಅವರ ಅಭಿನಯದ ಬಗ್ಗೆ ಮೆಚ್ಚುಗೆಗಳ ಮಹಾಪೂರವೇ ಹರಿದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *