ಆಪರೇಷನ್ ಹಂತದಲ್ಲಿ ಸಡನ್ ಚೇಂಜ್- ಜಾರಕಿ ಬ್ರದರ್ಸ್, ಬಳ್ಳಾರಿ ಮೇಲೆ ಬಿಎಸ್‍ವೈ ನಿಗಾ

ಬೆಂಗಳೂರು/ಬಳ್ಳಾರಿ: ಅಧಿಕಾರಕ್ಕಾಗಿ ಆಪರೇಷನ್ `ಹಂತ’ದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದ್ದು, ಇದೀಗ ಬೆಂಗಳೂರು ಬಿಟ್ಟು ಹೊರಗಡೆ ನಡೆಯುತ್ತಿದ್ಯಾ ಅನ್ನೋ ಪ್ರಶ್ನೆಯೊಂದು ರಾಜಕೀಯ ವಲಯದಲ್ಲಿ ಮೂಡಿದೆ.

ಶಾಸಕರು ವಾಪಸ್ ಸ್ವಕ್ಷೇತ್ರಕ್ಕೆ ಶಿಫ್ಟ್ ಆಗ್ತಿದ್ದಂತೆ ಬೆಳಗಾವಿ, ಬಳ್ಳಾರಿ, ರಾಯಚೂರು, ಬೀದರ್, ಕೊಪ್ಪಳ ಜಿಲ್ಲೆಗಳಲ್ಲಿ ಆಪರೇಷನ್ ಕೂಡ ಶಿಫ್ಟ್ ಮಾಡಲಾಗಿದೆ ಅಂತ ಹೇಳಲಾಗುತ್ತಿದೆ. ಜಾರಕಿಹೊಳಿ ಬ್ರದರ್ಸ್, ಬಳ್ಳಾರಿ ಕೈ ಶಾಸಕರ ಮೇಲೆ ಬಿಜೆಪಿ ಇದೀಗ ಹದ್ದಿನ ಕಣ್ಣಿಟ್ಟಿದೆ. ಹೀಗಾಗಿ ಬಿಜೆಪಿ ಇನ್ನರ್ ಗೇಮರ್ ಶ್ರೀರಾಮುಲು ಅವರು ನಿರಂತರ ಸಂಪರ್ಕದಲ್ಲಿ ಇದ್ದಾರೆ ಎನ್ನಲಾಗಿದೆ.

ಶುಕ್ರವಾರ, ಶನಿವಾರ ಎರಡು ದಿನ ಕೆಲ ಕ್ಷೇತ್ರಗಳ ಶಾಸಕರ ಮೇಲೆ ಬಿಜೆಪಿ ಕಣ್ಣು ಬಿದ್ದಿದ್ದು, ಕೆಲ ಶಾಸಕರ ಕ್ಷೇತ್ರಗಳಲ್ಲೇ ಆಪರೇಷನ್ ಹಂತದ ಟಚ್ ಮುಂದುವರಿದಿದೆ ಅಂತ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಯಡಿಯೂರಪ್ಪರಿಗೆ ಅಮಿತ್ ಶಾ ಖಡಕ್ ಸೂಚನೆ

ಸಚಿವ ಸ್ಥಾನಕ್ಕಾಗಿ ಬ್ಲಾಕ್‍ಮೇಲ್ ತಂತ್ರ:
ಇತ್ತ ಬಳ್ಳಾರಿಯಲ್ಲಿ ಜಾರಕಿಹೊಳಿ ಹೆಸರಲ್ಲಿ ನಾಗೇಂದ್ರ, ಬಂಜಾರ ಸಮಾಜದ ಹೆಸರಲ್ಲಿ ಭೀಮಾನಾಯ್ಕ್ ರಿಂದ ಬ್ಲಾಕ್ ಮೇಲ್ ಮಾಡ್ತಿದ್ರೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ ಇದೀಗ ಸಚಿವ ಜಾರಕಿಹೊಳಿ ಹೆಸರಲ್ಲಿ ಆಟ ಆಡಲು ಶುರು ಮಾಡಿದ್ದಾರೆ. ಜಾರಕಿಹೊಳಿ ಸಹೋದರರಿಗೆ ತೊಂದರೆ ಕೊಟ್ಟರೆ ಸರಿಯಿರಲ್ಲ ಅಂತಾ ಪರೋಕ್ಷವಾಗಿ ಎಚ್ಚರಿಕೆ ನೀಡುತ್ತಿದ್ದಾರೆ. ಜೊತೆಗೆ ತಾವೂ ಸಹ ಸಚಿವ ಸ್ಥಾನ ಆಕ್ಷಾಂಕಿ ಅಂತ ಹೇಳುತ್ತಿದ್ದಾರೆ.

ಬಂಜಾರ ಸಮಾಜದ ಶಾಸಕರಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಸಹ ಬ್ಲಾಕ್ ಮೇಲ್ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ನನಗೆ ಸಚಿವ ಸ್ಥಾನ ಕೊಡಿ ಇಲ್ಲವೇ ನೋಡಿ ಅಂತಿದ್ದಾರೆ. ಬಳ್ಳಾರಿ ಜಿಲ್ಲೆ ಉಸ್ತುವಾರಿ ಸಚಿವರನ್ನಾಗಿ ಡಿಕೆ ಶಿವಕುಮಾರ್ ಅವರನ್ನು ನೇಮಿಸಿದ್ದಕ್ಕೆ ಅಸಮಾಧಾನಗೊಂಡಿರುವ ಶಾಸಕ ಆನಂದಸಿಂಗ್ ಸಹ ಬಹಿರಂಗವಾಗಿಯೇ ನಮ್ಮಗೆ ಯಾರಿಗಾದ್ರೂ ಸಚಿವ ಸ್ಥಾನ ಕೊಡಿ ಅಂತಾ ಹೊಸ ಅಟ ಶುರು ಮಾಡಿಕೊಂಡಿರುವುದು ಕಾಂಗ್ರೆಸ್ ಪಾಲಿಗೆ ಕಂಟಕವಾಗಿ ಪರಿಗಣಿಸಿದೆ. ಇದನ್ನೂ ಓದಿ: ಡಿಕೆಶಿ ಜೊತೆ ಭಿನ್ನಾಭಿಪ್ರಾಯ, ಪಕ್ಷ ಬಿಡೋ ಬಗ್ಗೆ ಆನಂದ್ ಸಿಂಗ್ ಸ್ಪಷ್ಟನೆ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *