ರಾಜ್ಯಾದ್ಯಂತ ಗಣೇಶ ಹಬ್ಬದ ಸಂಭ್ರಮ – ಬೆಂಗ್ಳೂರಲ್ಲಿ ರಾತ್ರಿಯೆಲ್ಲಾ ಟ್ರಾಫಿಕ್

ಬೆಂಗಳೂರು: ದೇಶಾದ್ಯಂತ ಗೌರಿ-ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದಲೇ ಸಡಗರ ಮನೆ ಮಾಡಿದೆ.

ಕೆ.ಆರ್. ಮಾರ್ಕೆಟ್, ಯಶವಂತಪುರ ಮಾರ್ಕೆಟ್ ಸೇರಿದಂತೆ ನಗರದ ಎಲ್ಲಾಕಡೆ ಗಣೇಶ್ ಮೂರ್ತಿಗಳು ಹಾಗೂ ಹೂ ಹಣ್ಣಿನ ಖರೀದಿಯ ಭರಾಟೆ ತಡರಾತ್ರಿವರೆಗೂ ನಡೀತು. ಹೈದರಾಬಾದ್, ಮುಂಬೈ, ಕೋಲ್ಕತ್ತಾ, ಚೆನ್ನೈ, ದೆಹಲಿಗಳಲ್ಲಿ ಬೃಹದಾಕಾರದ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗ್ತಿದೆ. ಕೆಲವರಂತು ಹಣ್ಣುಗಳು, ಕಬ್ಬಿನ ಜಲ್ಲೆ ಸೇರಿದಂತೆ ಪರಿಸರ ಸ್ನೇಹಿಗಣಪನನ್ನೂ ಆರಾಧಿಸ್ತಿದ್ದಾರೆ. ಇದನ್ನೂ ಓದಿ: ಗಣೇಶ ಚತುರ್ಥಿಗೆ ಸಂಬಂಧಿಸಿದ ಸುದ್ದಿ ಓದಲು ಕ್ಲಿಕ್ ಮಾಡಿ

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಬುಧವಾರ ಬೆಂಗಳೂರಿನ ಹೃದಯಭಾಗ ಮೆಜೆಸ್ಟಿಕ್ ಸುತ್ತಮುತ್ತ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಬ್ಬದ ಪ್ರಯುಕ್ತ ಜನ ತಮ್ಮ ತಮ್ಮ ಊರಿನತ್ತ ಪ್ರಯಾಣ ಬೆಳೆಸಿದ್ರು. ವಾಹನ ದಟ್ಟಣೆಯಿಂದಾಗಿ ಮೆಜೆಸ್ಟಿಕ್, ಕೆಆರ್ ಪುರಂ, ಜಾಲಹಳ್ಳಿ ಕ್ರಾಸ್ ಸೇರಿದಂತೆ ನಗರದ ಹಲವೆಡೆ ಫುಲ್ ಟ್ರಾಫಿಕ್ ಜಾಮ್ ಉಂಟಾಯಿತು. ಟ್ರಾಫಿಕ್ ಕಿರಿಕಿರಿಯಿಂದ ಜನ ಹರಸಾಹಸ ಪಡಬೇಕಾಯಿತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *