ದೇಶಾದ್ಯಂತ ಭಾರತ್ ಬಂದ್ ಆರಂಭ- ಬೃಹತ್ ಬೆಂಗಳೂರು ಸ್ತಬ್ಧ

ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಕರೆಕೊಟ್ಟಿರುವ ಭಾರತ್ ಬಂದ್‍ಗೆ ಬೆಂಗಳೂರಲ್ಲಿ ಇಡೀ ಸಾರಿಗೆ ವ್ಯವಸ್ಥೆಯೇ ಸ್ತಬ್ಧವಾಗಿದೆ. ಬಂದ್‍ಗೆ ಸಾರಿಗೆ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿರುವುದರಿಂದ ಬೆಂಗಳೂರಿನ ಸಂಚಾರ ವ್ಯವಸ್ಥೆಯೇ ಸ್ತಬ್ಧವಾಗಿದೆದೆ. ಬಿಎಂಟಿಸಿ ಜೊತೆಗೆ ರಾಜ್ಯಾದ್ಯಂತ ಕೆಎಸ್‍ಆರ್‍ಟಿಸಿ ಸಂಚಾರ ಕೂಡ ನಿಂತಿದೆ. ಹಾಗಾಗಿ ಬೆಂಗಳೂರಿಗೆ ಬರುವವರು ಹಾಗೂ ಬೆಂಗಳೂರಿನಿಂದ ತೆರಳುವವರು ತಮ್ಮ ಪ್ರಯಾಣವನ್ನು ಕ್ಯಾನ್ಸಲ್ ಮಾಡಿದ್ರೆ ಒಳ್ಳೆಯದು.

ಬಸ್ ಸಂಚಾರದ ಬಳಿಕ ಆಟೋ, ಟ್ಯಾಕ್ಸಿ ಮತ್ತು ಆಪ್ ಆಧಾರಿತ ಓಲಾ, ಊಬರ್ ಕ್ಯಾಬ್‍ಗಳನ್ನು ಜನರು ಬಳಸುತ್ತಾರೆ. ಓಲಾ, ಊಬರ್, ಟ್ಯಾಕ್ಸಿ ಫಾರ್ ಶ್ಯೂರ್ ಎಲ್ಲವೂ ಬಂದ್ ಆಗಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಜಯ ಕರ್ನಾಟಕ ಆಟೋ ಘಟಕ ಮಾತ್ರ ಬಂದ್‍ಗೆ ಬೆಂಬಲಿಸಿದ್ದು, ಉಳಿದ ಆಟೋಗಳು ಬಂದ್ ಬೆಂಬಲಿಸಲ್ಲ. ಹಾಗಾಗಿ ಆಟೋ ಸಂಚಾರ ವ್ಯವಸ್ಥೆ ಇದೆ.

ಭಾರತ್ ಬಂದ್ ಬಂಡವಾಳ ಮಾಡಿಕೊಂಡ ಆಟೋದವರು ಪ್ರಯಾಣಿಕರ ಸುಲಿಗೆಗೆ ನಿಂತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇತ್ತ ನಮ್ಮ ಮೆಟ್ರೋ ಸಂಚಾರ ಎಂದಿನಂತೆ ಬೆಳಗ್ಗೆ 6 ಗಂಟೆಯಿಂದಲೇ ಆರಂಭವಾಗಿದೆ. ಪ್ರತಿನಿತ್ಯ ಜನಜಂಗುಳಿಯಿಂದ ಕೂಡಿರುತ್ತಿದ್ದ ಕೆ.ಆರ್.ಮಾರುಕಟ್ಟೆ ಜನರಿಲ್ಲದೇ ಖಾಲಿ ಖಾಲಿ ಕಾಣುತ್ತಿದೆ. ಯಶವಂತಪುರ, ಶಾಂತಿ ನಗರ ಡಿಪೋಗಳಿಂದ ಬಸ್ ಗಳು ಹೊರ ಬಂದಿಲ್ಲ. ದೂರದ ಊರುಗಳಿಂದ ಬಂದಿರುವ ಜನರು ತಮ್ಮ ನಿಗದಿತ ಸ್ಥಳಕ್ಕೆ ತಲುಪಲು ಹರಸಾಹಸ ಪಡುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *