ಮೈಸೂರು: ಮಕ್ಕಳಿಗೆ ಹೀರೋಗಳೆಂದರೆ ಇಷ್ಟ. ಅದೇ ರೀತಿ ಸಂಸದ ಪ್ರತಾಪ್ ಸಿಂಹ ಅವರ ಮಗಳು ತನ್ನ ನೆಚ್ಚಿನ ನಟನನ್ನು ಭೇಟಿ ಮಾಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಪ್ರತಾಪ್ ಸಿಂಹ ಮಗಳ ನೆಚ್ಚಿನ ನಾಯಕ ರಾಕಿಂಗ್ ಸ್ಟಾರ್ ಯಶ್. ಇತ್ತೀಚೆಗೆ ಪ್ರತಾಪ್ ಸಿಂಹ ಮಗಳು ಯಶ್ ಅವರನ್ನು ಭೇಟಿ ಮಾಡಿದ್ದು, ಯಶ್ ಕೂಡ ಆಕೆಯೊಂದಿಗೆ ಕೆಲ ಹೊತ್ತು ಮಾತನಾಡಿ ಸಮಯ ಕಳೆದಿದ್ದಾರೆ.
My daughter with her favourite Hero @NimmaYash !! pic.twitter.com/ZgMRhRPEGq
— Prathap Simha (@mepratap) September 4, 2018
ಯಶ್ ಜೊತೆ ಮಾತನಾಡುವಾಗ ಪ್ರತಾಪ್ ಸಿಂಹ ಮಗಳು ಅವರು ತೊಡೆಯ ಮೇಲೆ ಕುಳಿತಿದ್ದಾಳೆ. ಈ ಸಂದರ್ಭದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಆ ಫೋಟೋವನ್ನು ಪ್ರತಾಪ್ ಸಿಂಹ ಅವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋ ಜೊತೆಗೆ “ನನ್ನ ಮಗಳು, ಜೊತೆಗೆ ಅವಳ ನೆಚ್ಚಿನ ಹೀರೋ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಮೈಸೂರಿಗೆ ಬಂದಿದ್ದರು. ಈ ವೇಳೆ ಪ್ರಧಾನಿ ಮೋದಿ, ಪ್ರತಾಪ್ ಸಿಂಹರ ಮಗಳಿಗೆ ವೇದಿಕೆಯ ಮೇಲೆ ಚಾಕಲೇಟ್ ನೀಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv


Leave a Reply