ನಾನೂ ವೋಟ್ ಹಾಕುತ್ತೇನೆಂದು ಹಠ ಹಿಡಿದ 3ರ ಪೋರ- ಕೈಗೆ ಇಂಕ್ ಹಾಕಿಸಿಕೊಂಡು ಖುಷಿಪಟ್ಟ

ಉಡುಪಿ: ಅಪ್ಪ ಅಮ್ಮನ ಜೊತೆ ಹೋಗಿ ನಾನೂ ವೋಟ್ ಹಾಕುತ್ತೇನೆ ಅಂತಾ ನಿಟ್ಟೂರಿನ 3 ವರ್ಷದ ಪೋರ ಹಠ ಹಿಡಿದು, ಕೊನೆಗೆ ಅತ್ತು ಕರೆದು ಕೈಗೆ ಇಂಕ್ ಹಾಕಿಸಿಕೊಂಡಿದ್ದಾನೆ.

ಹಾಲುಗಲ್ಲದ ಹಸುಳೆ ರಿಹಾಂಶ್‍ಗೆ ಈಗ ಮೂರರ ಹರೆಯ. ಇವನು ಉಡುಪಿ ಶಾಸಕ ರಘುಪತಿ ಭಟ್ಟರ ಮಗ. ಅಪ್ಪ ಅಮ್ಮನ ಜೊತೆಗೆ ಮತಗಟ್ಟೆಗೆ ಬಂದ, ಅವರು ಮತದಾನ ಮಾಡಲು ಹೋಗುತ್ತಿದ್ದಂತೆ ನಾನೂ ವೋಟ್ ಹಾಕುತ್ತೇನೆ ಅಂತಾ ಹಠ ಮಾಡಿ, ಅಳಲಾರಂಭಿಸಿದ್ದಾನೆ. ಶಾಸಕರ ಕಾರು ಚಾಲಕ ವಿಜಯ್, ಅಧಿಕಾರಿಗಳ ಬಳಿಗೆ ರಿಹಾಂಶ್‍ನನ್ನು ಕರದೊಯ್ದರು. ಮತಗಟ್ಟೆಯ ಹೊರಗೆ ಕುಳಿತ್ತಿದ್ದ ಅಧಿಕಾರಿಗಳು ಪೆನ್ನಿನಿಂದ ರಿಹಾಂಶ್ ಎಡಗೈ ತೋರ್ಬೆರಳಿಗೆ ಶಾಹಿಮುದ್ರೆ ಹಾಕಿಸಿದ್ದಾರೆ. ಆಗ ಆತನು ಅಳುವುದನ್ನು ನಿಲ್ಲಿಸಿದ್ದಾನೆ.

ಗಮ್ಮತ್ತು ಏನಂದರೆ ಶಾಹಿ ಹಾಕ್ಕೊಂಡು ಬಂದವನೇ ವಿಕ್ಟರಿ ಸಿಂಬಲ್ ತೋರಿಸುತ್ತಾನೆ. ಮೋದಿ ಗೆಲ್ತಾರೆ ಅಂತಾನೆ. ನಾಳೆ ಪೇಪರಲ್ಲಿ ಫೋಟೋ ಹಾಕಿ ಅಂತಾ ಮಾಧ್ಯಮದವರಿಗೆ ಮನವಿ ಮಾಡಿಕೊಂಡಿದ್ದಾನೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ರಘುಪತಿ ಭಟ್, ಕಳೆದ ಕೆಲವು ದಿನಗಳಿಂದ ಮನೆಯಲ್ಲಿ ಚುನಾವಣೆಯದ್ದೇ ವಾತಾವರಣ. ಹಾಗಾಗಿ ವೋಟ್ ಹಾಕುತ್ತೇನೆ ಅಂತಾ ಹಠ ಮಾಡುತ್ತಿದ್ದ. ಆತ ಕೂಡ ನಮ್ಮಂತೆ ಮೋದಿ ಅಭಿಮಾನಿ ಅಂತಾ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *