ನನಗೂ ಸಿಎಂ ಆಗಲು ಅರ್ಹತೆ ಇರಬಹುದು, ಆದ್ರೆ ಅವಕಾಶ ಸಿಕ್ಕಿಲ್ಲ: ದೇಶಪಾಂಡೆ

ನವದೆಹಲಿ: ನನಗೂ ಮುಖ್ಯಮಂತ್ರಿಯಾಗುವ ಅರ್ಹತೆ ಇರಬಹುದು, ಆದರೆ ಅವಕಾಶ ಸಿಕ್ಕಿಲ್ಲ. ಹಾಗೆಂದ ಮಾತ್ರಕ್ಕೆ ನಾನು ಎಂದಿಗೂ ಬೇಸರ ಪಟ್ಟುಕೊಂಡಿಲ್ಲವೆಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿಕೆ ನೀಡಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೇಜವಾಬ್ದಾರಿ ಹೇಳಿಕೆ ನೀಡುವಂತಹ ವ್ಯಕ್ತಿಯಲ್ಲ. ಅವರ ಹೇಳಿಕೆಯಲ್ಲಿ ಅನಾವಶ್ಯಕ ಗೊಂದಲ ಸೃಷ್ಟಿಯಾಗುತ್ತಿದೆ. ನನ್ನ ಅನುಭವದಲ್ಲಿ ಸಾಕಷ್ಟು ರಾಜಕೀಯ ಏರುಪೇರುಗಳನ್ನು ಕಂಡಿದ್ದೇನೆ. ಆದರೆ ಈ ಥರದ ವಾತಾವರಣ ಕಂಡಿಲ್ಲ. ಸಿದ್ದರಾಮಯ್ಯನವರು ತಮ್ಮ ಹೇಳಿಕೆಗೆ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರಕ್ಕೆ ಅವರ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಾನು ಸಿಎಂ ಆಗ್ತೀನಿ ಅಂತ ಹೇಳಿದ್ದು ಯಾಕೆ: ಸ್ಪಷ್ಟನೆ ಕೊಟ್ಟ ಸಿದ್ದರಾಮಯ್ಯ

ಅಲ್ಲದೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನನ್ನನ್ನು ಸಹ ಮುಖ್ಯಮಂತ್ರಿ ಅಭ್ಯರ್ಥಿ ಅಂತ ಹೇಳುತ್ತಾರೆ. ಅವರಿಗೆ ಗೊತ್ತಿರಬಹುದು ನನಗೂ ಸಿಎಂ ಆಗುವ ಅರ್ಹತೆಯಿದೆ ಎಂದು ಹೀಗಾಗಿ ಅವರು ಆ ರೀತಿ ಹೇಳಿದ್ದಾರೆ. ನನಗೂ ಸಿಎಂ ಆಗುವ ಆರ್ಹತೆ ಇರಬಹುದು, ಆದರೆ ಅವಕಾಶಗಳು ಸಿಕ್ಕಿಲ್ಲ. ಅವಕಾಶ ಸಿಕ್ಕಿಲ್ಲವೆಂದು ನಾನೆಂದೂ ಬೇಸರಪಟ್ಟುಕೊಂಡವನಲ್ಲ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *