ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ, ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ದೂರು ದಾಖಲು

ಕೊಪ್ಪಳ: ಮತದಾರರಿಗೆ ಹಣದ ಆಮಿಷವೊಡ್ಡಿದ ಆರೋಪದಡಿ ಮಾಜಿ ಶಾಸಕ ಮತ್ತು ನಗರಸಭೆ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ದೂರು ದಾಖಲಾಗಿದೆ.

ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ, ನಗರಸಭೆ ಕಾಂಗ್ರೆಸ್ ಅಭ್ಯರ್ಥಿ ಖಾಸಿಂ ಸಾಬ್ ಗದ್ವಾಲ್ ವಿರುದ್ಧ ಗಂಗಾವತಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಎಂ.ಸಿ.ಸಿ ತಂಡದ ಪರಸಪ್ಪರಿಂದ ಅನ್ಸಾರಿ ಹಾಗೂ ಖಾಸಿಂ ಸಾಬ್ ವಿರುದ್ಧ ದೂರು ದಾಖಲಿಸಿದ್ದಾರೆ.

ಕೆಲವು ದಿನಗಳ ಹಿಂದೆ ಸ್ಥಳೀಯ ಸಂಸ್ಥೆಗಳ ಚುನವಾಣೆ ಪ್ರಚಾರದಲ್ಲಿ ಇಕ್ಬಾಲ್ ಅನ್ಸಾರಿ ಹಣದ ಆಮಿಷ ನೀಡುವ ಬಗ್ಗೆ ಭಾಷಣ ಮಾಡಿದ್ದರು. ಹಾಲಿ ಶಾಸಕ ಪರಣ್ಣ ಮುನವಳ್ಳಿಗೆ ಟಾಂಗ್ ಕೊಡಲು ಹೋಗಿ ಹಣದ ಆಮಿಷ ಒಡ್ಡಿದ್ದರು.

ನಿಮಗೆ ಖೋಟಾ ನೋಟು ಬೇಕಾ ಅಥವಾ ಅನ್ಸಾರಿ ಹಾಗೂ ಖಾಸಿಂ ಸಾಬ್‍ನ ಅಸಲಿ ನೋಟು ಬೇಕಾ ಎಂದು ಭಾಷಣ ಮಾಡಿದ್ದಾರೆ. ನಿಮಗೆ ಅಸಲಿ 100 ನೋಟು ಬೇಕಾ ಅಥವಾ ವಿರೋಧ ಪಕ್ಷಗಳು ಕೊಡುವ  500 ಮತ್ತು 1000 ರೂ. ಖೋಟಾ ನೋಟು ಬೇಕಾ ಎಂದು ಬಹಿರಂಗವಾಗಿ ಹೇಳಿದ್ದಾರೆ.

ಇದೇ 25 ರಂದು ವಾರ್ಡ್ ನಂ8 ರಲ್ಲಿ ಭಾಷಣ ಮಾಡಿದ್ದರು. ಆದ್ದರಿಂದ ಈ ರೀತಿ ಭಾಷಣ ಮಾಡಿ ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿರುವುದರಿಂದ ಅವರ ವಿರುದ್ಧ ದೂರು ದಾಖಲಾಗಿದೆ. ಈ ಸಂಬಂಧ ಗಂಗಾವತಿ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 171(ಇ) ಅಡಿಯಲ್ಲಿ ದೂರು ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *