ಕೊಡಗಿನ 31 ಕುಟುಂಬಕ್ಕೆ ರಶ್ಮಿಕಾ ತಲಾ 10 ಸಾವಿರ ರೂ. ಆರ್ಥಿಕ ಸಹಾಯ

ಮಡಿಕೇರಿ: ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಹಾಗೂ ಅವರ ಕುಟುಂಬದವರು ಸುಮಾರು 40ಕ್ಕೂ ಹೆಚ್ಚು ಮನೆ-ಮಠ ಕಳೆದುಕೊಂಡ ನಿರಾಶ್ರಿತರಿಗೆ ಸಹಾಯ ಮಾಡಿದ್ದಾರೆ.

ರಶ್ಮಿಕಾ ಖುದ್ದಾಗಿ ಗ್ರಾಮಗಳಿಗೆ ಭೇಟಿ ಮಾಡಬೇಕು ಎಂದುಕೊಂಡಿದ್ದರು. ಆದರೆ ರಸ್ತೆ ಸರಿಯಿಲ್ಲ ಅಲ್ಲಿ ಜನ ವಾಸ ಮಾಡುತ್ತಿಲ್ಲ ಎಂದು ಅವರ ತಂದೆ ಹೇಳಿದಾಗ ಎಲ್ಲರನ್ನು ವಿರಾಜಪೇಟೆಯ ಕಲ್ಯಾಣ ಮಂಟಪದಲ್ಲಿ ಕರೆಸಿಕೊಂಡು ಸಹಾಯ ಹಸ್ತ ಚಾಚಿದ್ದಾರೆ.

ರಶ್ಮಿಕಾ ಒಟ್ಟು 31 ಕುಟುಂಬಕ್ಕೆ ಹಣದ ಸಹಾಯ ಮಾಡಿದ್ದು, ಒಂದು ಕುಟುಂಬಕ್ಕೆ ತಲಾ 10 ಸಾವಿರ ರೂ. ನೀಡಿದ್ದಾರೆ. ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ಮನೆ ಕಟ್ಟಲು ಸಹಾಯ ಮಾಡುವುದಾಗಿ ರಶ್ಮಿಕಾ ಹಾಗೂ ಅವರ ಕುಟುಂಬದವರು ಈ ವೇಳೆ ಭರವಸೆ ನೀಡಿದರು.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಶ್ಮಿಕಾ, ಕೊಡಗಿನಲ್ಲಿ ಮಳೆಯಿಂದಾಗಿ ಪ್ರವಾಹ ಬಂದ ವೇಳೆ ನಾನು ಥೈಲ್ಯಾಂಡ್ ನಲ್ಲಿ ಚಿತ್ರೀಕರಣದಲ್ಲಿದ್ದೆ. ಮೊದಲಿಗೆ ನನಗೆ ಅಘಾತ ಆಯ್ತು. ನಂತರ ನನ್ನ ತಂದೆಗೆ ಕರೆ ಮಾಡಿ ಈ ಜನರಿಗೆ ಏನು ಮಾಡಬೇಕು ಎಂದು ಕೇಳುತ್ತಿದ್ದೆ. ಆ ದಿನ ನಾನು ನನ್ನ ತಂದೆಗೆ ಸಾಕಷ್ಟು ಕಿರಿಕಿರಿ ಮಾಡಿದೆ. ಆಗ ನನ್ನ ತಂದೆ ಜನಗಳ ಜೊತೆ ನಾನು ಸಂಪರ್ಕದಲ್ಲಿದ್ದೇನೆ. ನಾನು ಅವರಿಗೆ ಅಕೌಂಟ್ ಡಿಟೇಲ್ಸ್ ನೀಡುತ್ತಿದ್ದೇನೆ ಎಂದು ಹೇಳಿದರು. ನಂತರ ನನ್ನ ತಂದೆ ಅಕೌಂಟ್ ಡಿಟೇಲ್ಸ್ ನನಗೆ ನೀಡಿದ್ದರು ಎಂದು ತಿಳಿಸಿದರು. ಇದನ್ನು ಓದಿ: ಮನಸ್ಪೂರ್ವಕವಾಗಿ ಕೊಡಗಿನ ಪರವಾಗಿ ಒದ್ದೆಕಣ್ಣಿನಿಂದ ವಂದಿಸುತ್ತಿದ್ದೇನೆ- ರಶ್ಮಿಕಾ ಮಂದಣ್ಣ ಭಾವನಾತ್ಮಕ ಪತ್ರ

ಸಾಮಾಜಿಕ ಜಾಲತಾಣದಲ್ಲಿ ಅಕೌಂಟ್ ಡಿಟೇಲ್ಸ್ ಹಾಕಿ ದೇಣಿಗೆ ಸಂಗ್ರಹ ಮಾಡಲು ಶುರು ಮಾಡಿದೆ. ನನ್ನ ಅಭಿಮಾನಿಗಳು ಕೂಡ ದೇಣಿಗೆ ಸಂಗ್ರಹ ಮಾಡಲು ಶುರು ಮಾಡಿದ್ದರು. ನಂತರ ನನ್ನ ಸ್ನೇಹಿತರಿಗೆ ಕರೆ ಮಾಡಿದಾಗ ಅವರು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದರು. ಆಗ ನಾನು ಬೆಂಗಳೂರಿನಿಂದಲೂ ನನ್ನ ಸ್ನೇಹಿತರಿಗೆ ಸಹಾಯ ಮಾಡಲು ಕಳುಹಿಸುತ್ತೇನೆ ಎಂದು ಅವರ ಬಳಿ ಹೇಳಿದೆ ಎಂದರು.

ನನ್ನ ಕೈಲಾದಷ್ಟು ನಾನು ಸಹಾಯ ಮಾಡುತ್ತೇನೆ. ಪ್ರತಿ ದಿನ ಏನಾಗುತ್ತಿದೆ ಎನ್ನುವುದನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಅಪ್‍ಡೇಟ್ ಮಾಡುತ್ತಿದ್ದೆ. ನನ್ನ ಅಭಿಮಾನಿಗಳಿಗೂ ಕರೆ ಮಾಡಿ ಏನೂ ಸಹಾಯ ಮಾಡುವುದು ಎಂದು ಕೇಳುತ್ತಿದ್ದೆ. ಆಗ ಅವರು ರಶ್ಮಿಕಾ ಮಂದಣ್ಣ ಹೆಸರಿನಲ್ಲಿ ದೇಣಿಗೆ ಸಂಗ್ರಹ ಮಾಡುತ್ತೇವೆ ಎಂದು ಹೇಳಿದಾಗ ನನ್ನ ಹೆಸರಿನಲ್ಲಿ ಸಂಗ್ರಹ ಮಾಡಬೇಡಿ ಎಂದು ಅವರ ಬಳಿ ನಾನು ಕೇಳಿಕೊಂಡೆ ಎಂದು ರಶ್ಮಿಕಾ ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *