ದೂರು ನೀಡಲು ಬಂದವನ ಬಳಿ ಲಂಚ ಪಡೆದ ಪೊಲೀಸ್ ಪೇದೆ! -ವಿಡಿಯೋ ನೋಡಿ

ವಿಜಯಪುರ: ಠಾಣೆಗೆ ದೂರು ನೀಡಲು ಆಗಮಿಸಿದ್ದ ದೂರುದಾರನಿಂದಲೇ ಮುಖ್ಯ ಪೊಲೀಸ್ ಪೇದೆಯೋರ್ವ ಲಂಚ ವಸೂಲಿ ಮಾಡಿದ್ದು ಇದೀಗ ಆ ವಿಡಿಯೋ ವೈರಲ್ ಆಗಿದೆ.

ಬಸವನಬಾಗೇವಾಡಿ ಪೊಲೀಸ್ ಠಾಣೆಯ ಪೇದೆ ಪರಶುರಾಮ್ ಕಟಬರ್ ವಾಹನ ಬಾಡಿಗೆಗೆ ಎಂದು ಹೇಳಿ ಲಂಚವನ್ನು ಪಡೆದಿದ್ದಾನೆ.

ಕೆಲ ದಿನಗಳ ಹಿಂದೆ ತಳೇವಾಡ ಗ್ರಾಮದ ಅಶೋಕ ಎಂಬುವವರು ಗುತ್ತಿಗೆದಾರನೋರ್ವನ ಮೇಲೆ ದೂರು ನೀಡಲು ಆಗಮಿಸಿದ್ದರು. ದೂರನ್ನು ಸ್ವೀಕರಿಸಿದ ನಂತರ ಆರೋಪಿಯನ್ನು ಬಂಧಿಸಿ ಕರೆ ತಂದು ವಿಚಾರಣೆ ಮಾಡಲು ವಾಹನ ತೆಗೆದುಕೊಂಡು ಹೋಗಬೇಕು. ಹೀಗಾಗಿ ಮುಖ್ಯ ಪೇದೆ ಪರಶುರಾಮ್ ವಾಹನದ ಬಾಡಿಗೆಗೆ ಹಣ ನೀಡಬೇಕೆಂದು ಸಪೀಡಿಸಿದ್ದಾನೆ. ಇಲ್ಲವಾದರೆ ತನಿಖೆ ವಿಳಂಬವಾಗುತ್ತದೆ. ನಾವು ಕೈಯಿಂದ ಹಣ ಹಾಕಿ ವಾಹನ ಬಾಡಿಗೆ ಮಾಡಿಕೊಂಡು ಹೋಗಿ ಆರೋಪಿಯನ್ನು ಕರೆ ತರಲು ಆಗುವುದಿಲ್ಲವೆಂದು ಬೆದರಿಸಿ ಹಣ ಪಡೆದಿದ್ದಾನೆ.

ಗುತ್ತಿಗೆದಾರನ ಕಾಮಗಾರಿಯ ವಾಹನಗಳನ್ನು ತನ್ನ ಜಮೀನಿನಲ್ಲಿ ಹೋಗಲು ಅಶೋಕ ಅನುಮತಿ ನೀಡಿದ್ದರು. ಆದರೆ ಗುತ್ತಿಗೆದಾರ ಕಾಮಗಾರಿ ಮುಗಿದ ಬಳಿಕ ಪರಿಹಾರದ ಹಣ ನೀಡದೇ ಸತಾಯಿಸಿದ್ದನು. ಇದನ್ನು ಪ್ರಶ್ನಿಸಿ ಗುತ್ತಿಗೆದಾರನ ಮೇಲೆ ದೂರು ನೀಡಲು ಆಗಮಿಸಿದ್ದ ವೇಳೆ ಮುಖ್ಯ ಪೇದೆಯ ಧನದಾಹ ಬಯಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=Tw2RFpT6AJk

Comments

Leave a Reply

Your email address will not be published. Required fields are marked *