ಚಿತ್ರದುರ್ಗ: ಅಣ್ಣ-ತಮ್ಮಂದಿರಿಬ್ಬರ ಜಗಳ ಬಿಡಿಸಲು ಬಂದ ವ್ಯಕ್ತಿಯೆ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚಳ್ಳಕೆರೆಯ ಬಲ್ಲನಾಯಕನಹಟ್ಟಿಯಲ್ಲಿ ನಡೆದಿದೆ.
ಸಣ್ಣಪಾಲಯ್ಯ ಮೃತ ವ್ಯಕ್ತಿ. ಜಮೀನು ವಿಷಯದಲ್ಲಿ ಉಜಿನ್ನಯ್ಯ ಮತ್ತು ಚಿನ್ನಪಾಲಯ್ಯ ಸಹೋದರರ ನಡುವೆ ಜಗಳ ಏರ್ಪಟ್ಟಿತ್ತು. ಉಜಿನ್ನಯ್ಯ ಮತ್ತು ಚಿನ್ನಪಾಲಯ್ಯ ಇಬ್ಬರ ಮಧ್ಯೆ 20 ಎಕರೆ ಜಮೀನಿಗಾಗಿ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ವಿಷಯವಾಗಿ ಶನಿವಾರ ಸಹ ಇಬ್ಬರ ನಡುವೆ ಜಗಳ ನಡೆದಿದೆ.
ಈ ವೇಳೆ ಪಕ್ಕದ ಮನೆಯಲ್ಲಿಯೇ ವಾಸವಾಗಿದ್ದ ಸಣ್ಣಪಾಲಯ್ಯ ಜಗಳ ಬಿಡಿಸಲು ಮುಂದಾಗಿದ್ದರು. ಮೂವರ ಮಧ್ಯೆ ತಳ್ಳಾಟ-ನೂಕಾಟ ಸಂಭವಿಸಿದೆ. ಗಲಾಟೆಯಲ್ಲಿ ಸಣ್ಣಪಾಲಯ್ಯರ ತಲೆ ಗೋಡೆಗೆ ತಾಗಿ ಗಾಯಗೊಂಡಿದ್ದರು. ಕೂಡಲೇ ಸಣ್ಣಪಾಲಯ್ಯರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಣ್ಣಪಾಲಯ್ಯ ಸಾವನ್ನಪ್ಪಿದ್ದಾರೆ. ಈ ಸಂಬಂಧ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply