ನೇಹಾ ಧುಪಿಯಾ ಬರ್ತ್ ಡೇ- ಪತಿಯಿಂದ ರೊಮ್ಯಾಂಟಿಕ್ ಫೋಟೋ ಪೋಸ್ಟ್

ಮುಂಬೈ: ಬಾಲಿವುಡ್ ನಟಿ ನೇಹಾ ಧುಪಿಯಾ ಇಂದು ತಮ್ಮ 38ನೇ ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಪತಿ ಅಂಗದ್ ಬೇಡಿ ಪತ್ನಿಯ ಹಾಟ್ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ನೇಹಾ ಮತ್ತು ದಂಪತಿ ರಜಾ ದಿನಗಳನ್ನು ಕಳೆಯಲು ಮಾಲ್ಡೀವ್ಸ್ ಗೆ ತೆರಳಿದ್ದ ಸಂದರ್ಭದಲ್ಲಿ ಕ್ಲಿಕ್ಕಿಸಿದ ಫೋಟೋ ಇದಾಗಿದ್ದು, ಜೋಡಿ ಸಖತ್ ರೊಮ್ಯಾಂಟಿಕ್ ಆಗಿ ಕಾಣುತ್ತಿದೆ.

ಎರಡು ದಿನಗಳ ಹಿಂದೆಯೇ ಅಂಗದ್ ಬೇಡಿ ತಾವು ತಂದೆ ಆಗುತ್ತಿರುವ ವಿಷಯವನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇನ್ ಸ್ಟಾಗ್ರಾಂನಲ್ಲಿ ನೇಹಾ ಬೇಬಿ ಬಂಪ್ ಫೋಟೋ ಹಾಕಿಕೊಂಡು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದ್ದ ಗಾಸಿಪ್ ನಿಜ. ನಾನು ತಂದೆ ಆಗ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಗರ್ಭಿಣಿಯಾದ ಬಳಿಕ ನಟಿಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡುತ್ತಾರೆ. ಆದ್ರೆ ನೇಹಾ ಲ್ಯಾಕ್ಮಿ ಫ್ಯಾಶನ್ ವೀಕ್ ನಲ್ಲಿ ಪತಿಯೊಂದಿಗೆ ಕ್ಯಾಟ್ ವಾಕ್ ಸಹ ಮಾಡಿದ್ದಾರೆ. ಈ ಹಿಂದೆ ಕರೀನಾ ಕಪೂರ್ ಸಹ ಬೇಬಿ ಬಂಪ್ ನೊಂದಿಗೆ ಕ್ಯಾಟ್ ವಾಕ್ ಮಾಡಿದ್ದರು.

ನೇಹಾ ಸಹ ಹಿರಿತೆರೆ ಮತ್ತು ಕಿರುತೆರೆಗಳಲ್ಲಿ ಗುರುತಿಸಿಕೊಂಡಿದ್ದಾರೆ. 2004ರಲ್ಲಿ ತೆರೆಕಂಡ ಖಯಾಮತ್: ಸಿಟಿ ಅಂಡರ್ ಥ್ರೀಟ್ ಸಿನಿಮಾ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ರು. ಜೂಲಿ, ಚುಪ್ ಚುಪ್ ಕೇ, ಸಿಂಗ್ ಇಸ್ ಕಿಂಗ್, ಕ್ಯಾ ಕೂಲ್ ಹೈ ಹಮ್, ತುಮಾರಿ ಸುಲು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತ ಕಿರುತೆರೆಯ ಹಲವು ರಿಯಾಲಿಟಿ ಶೋಗಳಿಗೆ ತೀರ್ಪುಗಾರರಾಗಿ, ನಿರೂಪಕರಾಗಿ ಮತ್ತು ಸ್ಪರ್ಧೆಯ ಅಭ್ಯರ್ಥಿಗಳಿಗೆ ಲೀಡರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಮೇ 10ರಂದು ನವದೆಹಲಿಯಲ್ಲಿ ತುಂಬಾ ಸರಳವಾಗಿ ಪೋಷಕರು ಮತ್ತು ಆಪ್ತ ಬಂಧುಗಳು ಸಮ್ಮುಖದಲ್ಲಿ ಮದುವೆ ನಡೆದಿತ್ತು. ಅಂಗದ್ ಬೇಡಿ ಹಿರಿತೆರೆ ಮತ್ತು ಕಿರುತೆರೆ ಎರಡರಲ್ಲೂ ಮಿಂಚುತ್ತಿದ್ದಾರೆ. ಕಯಾ ತರಣ್, ಫಾಲ್ತು, ಉಂಗ್ಲಿ, ಪಿಂಕ್, ಡಿಯರ್ ಜಿಂದಗಿ, ಟೈಗರ್ ಜಿಂದಾ ಹೈ ಮತ್ತು ಸೂರ್ಮಾ ಸಿನಿಮಾಗಳಲ್ಲಿ ಆನಂದ್ ನಟಿಸಿದ್ದಾರೆ. ಖಾಸಗಿ ಚಾನೆಲ್‍ನ ರಿಯಾಲಿಟಿ ಶೋಗಳಿಗೆ ನಿರೂಪಕರಾಗಿಯೂ ಗುರುತಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *