ದಿಗಂತ್ ಅಭಿನಯದ ಕಥೆಯೊಂದು ಶುರುವಾಗಿದೆ ಚಿತ್ರ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಈ ಮೂಲಕವೇ ದಿಗಂತ್ ಬದುಕಲ್ಲಿ ಹೊಸ ಅಲೆಯೊಂದು ಶುರುವಾಗೋ ಲಕ್ಷಣಗಳೂ ಕಾಣಿಸಲಾರಂಭಿಸಿದೆ. ಈ ಚಿತ್ರದ ಯಶಸ್ಸಿನ ಬೆನ್ನಲ್ಲಿಯೇ ದಿಗಂತ್ ಬಾಲಿವುಡ್ ಚಿತ್ರವೊಂದರಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ!
ಬಾಲಿವುಡ್ನ ಖ್ಯಾತ ನಿರ್ದೇಶಕ ಕುನಾಲ್ ಕೊಹ್ಲಿ ಪೌರಾಣಿಕ ಕಥಾ ಹಂದರದ ರಾಮ್ ಯುಗ್ ಎಂಬ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಇದರಲ್ಲಿನ ಶ್ರೀರಾಮಚಂದ್ರನ ಪಾತ್ರಕ್ಕೆ ದೂದ್ ಪೇಡಾ ದಿಗಂತ್ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಕುನಾಲ್ ಕೊಹ್ಲಿ ನಿರ್ದೇಶನದ ಈ ಚಿತ್ರದಲ್ಲಿ ಬೇರೆ ಬೇರೆ ಭಾಷೆಗಳ ಸ್ಟಾರ್ ನಟರೂ ಒಂದೊಂದು ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಆದರೆ ರಾಮನ ಪಾತ್ರಕ್ಕೆ ದಿಗಂತ್ ನಿಕ್ಕಿಯಾಗಿದ್ದಾರೆ.
ಬಹು ಕಾಲದಿಂದಲೂ ಕುನಾಲ್ ಮತ್ತು ದಿಗಂತ್ ಪರಿಚಿತರು. ಆದ್ದರಿಂದಲೇ ದಿಗಂತ್ ವ್ಯಕ್ತಿತ್ವಕ್ಕೆ ಮನ ಸೋತು ಅವರನ್ನೇ ಶ್ರೀರಾಮಚಂದ್ರನ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿರೋದಾಗಿ ಕುನಾಲ್ ಹೇಳಿದ್ದಾರೆ. ಇನ್ನು ದೂರದರ್ಶನದಲ್ಲಿ ಧಾರಾವಾಹಿಯಾಗಿ ಬರುತ್ತಿದ್ದ ರಾಮಾಯಣ ಕಥೆ ಅಂದ್ರೆ ದಿಗಂತ್ ಅವರಿಗೆ ಇಷ್ಟವಾಗುತ್ತಿತ್ತಂತೆ. ಬಾಲ್ಯದಲ್ಲಿಯೇ ಅವರನ್ನು ರಾಮನ ಪಾತ್ರ ಪ್ರಭಾವಿಸಿತ್ತಂತೆ. ಇದೀಗ ತಾನೇ ರಾಮನಾಗಿ ನಟಿಸೋ ಅವಕಾಶ ಸಿಕ್ಕಿದ್ದರಿಂದ ದಿಗಂತ್ ಖುಷಿಗೊಂಡಿದ್ದಾರೆ!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply