16 ಲಕ್ಷ ರೂ. ಮೌಲ್ಯದ ಗೋಡಂಬಿ ಕದ್ದ ಖರ್ತನಾಕ್ ಕಳ್ಳ ಅರೆಸ್ಟ್

ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ ಸುಮಾರು 16 ಲಕ್ಷ ರೂ. ಮೌಲ್ಯದ ಗೋಡಂಬಿ ಕಳ್ಳತನ ಮಾಡಿದ್ದ ಕಳ್ಳನನ್ನು ನಗರದ ವೈಯಾಲಿಕವಲ್ ಪೊಲೀಸರು ಬಂಧಿಸಿದ್ದಾರೆ.

ಪ್ರಶಾಂತ್ ತಾನಾಜಿ ಪಾಟೀಲ್ ಬಂಧಿತ ಆರೋಪಿ. ಕಳೆದ ಎರಡು ದಿನಗಳ ಹಿಂದೆ ವೈಯಾಲಿಕಾವಲ್‍ನ ಓಂ ಶ್ರೀ ಟ್ರೇಡರ್ಸ್ ಅಂಗಡಿಯ ಮಾಲೀಕನಿಗೆ ಸೇರಿದ್ದ ಗೋಡಂಬಿ ಕಳ್ಳತನ ಮಾಡಿದ್ದ. ಆರೋಪಿ ಪ್ರಶಾಂತ್ ಕದ್ದ ಗೋಡಂಬಿ ಬರೋಬ್ಬರಿ 1,980 ಕೆಜಿ ಹೊಂದಿದ್ದು, ಸುಮಾರು 16 ಲಕ್ಷ ರೂ. ಮೌಲ್ಯ ಹೊಂದಿತ್ತು.

ಓಂ ಶ್ರೀ ಟ್ರೇಡರ್ಸ್ ಮಾಲೀಕನ ಬಳಿ ಕೆಲಸ ಮಾಡಿಕೊಂಡಿದ್ದ ಆರೋಪಿ ಪ್ರಶಾಂತ್ ತಾನಾಜಿ ನಕಲಿ ಕೀ ಬಳಸಿ ಗೋಡಂಬಿ ಕಳ್ಳತನ ಮಾಡಿದ್ದ. ಬಳಿಕ ಕದ್ದ ಗೋಡಂಬಿಯನ್ನು ಸ್ನೇಹಿತನ ಮನೆಯಲ್ಲಿ ಅಡಗಿಸಿಟ್ಟು ಪರಾರಿಯಾಗಿದ್ದ. ಈ ಕುರಿತು ದೂರು ಸ್ವೀಕರಿಸಿದ ಪೊಲೀಸರು ಅನುಮಾನಗೊಂಡು ತನಿಖೆ ನಡೆಸಿದ ವೇಳೆ ಆರೋಪಿಯ ಕೃತ್ಯ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಸದ್ಯ ವೈಯಾಲಿಕವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *