ರಶ್ಮಿಕಾ ಅಭಿನಯಕ್ಕೆ ಮನಸೋತ ಟಾಲಿವುಡ್ ದಿಗ್ಗಜರು

ಹೈದರಾಬಾದ್: ಕನ್ನಡದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗದಲ್ಲಿ ಹವಾ ಎಬ್ಬಿಸಿದ್ದಾರೆ. ಅವರ ಅಭಿನಯ ನೋಡಿ ಟಾಲಿವುಡ್ ದಿಗ್ಗಜರು ಮನಸೋತಿದ್ದಾರೆ.

ರಶ್ಮಿಕಾ ಈಗ ‘ಗೀತಾ ಗೋವಿಂದಂ’ ಚಿತ್ರದ ಯಶಸ್ಸಿನಲ್ಲಿದ್ದಾರೆ. ಈ ಚಿತ್ರದಲ್ಲಿ ನಟ ವಿಜಯ್ ಹಾಗೂ ರಶ್ಮಿಕಾ ಅಭಿನಯ ನೋಡಿ ಟಾಲಿವುಡ್ ದಿಗ್ಗಜರಾದ ಮೆಗಾ ಸ್ಟಾರ್ ಚಿರಂಜೀವಿ, ಬಾಹುಬಲಿ ನಿರ್ದೇಶಕ ಎಸ್.ಎಸ್ ರಾಜಮೌಳಿ, ಮಹೇಶ್ ಬಾಬು, ರಾಮ್‍ಚರಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಸ್.ಎಸ್ ರಾಜಮೌಳಿ ಈಗ ಜೂ. ಎನ್‍ಟಿಆರ್ ಹಾಗೂ ರಾಮ್‍ಚರಣ್ ಚಿತ್ರವನ್ನು ನಿರ್ದೇಶನ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಸ್ವಲ್ಪ ಬಿಡುವು ಮಾಡಿಕೊಂಡು ಚಿತ್ರ ಬಿಡುಗಡೆ ಆದ ಮೊದಲನೇ ದಿನವೇ ಗೀತಾ ಗೋವಿಂದಂ ಚಿತ್ರವನ್ನು ವೀಕ್ಷಿಸಿದ್ದಾರೆ. ಚಿತ್ರ ವೀಕ್ಷಿಸಿದ ತಕ್ಷಣ ರಾಜಮೌಳಿ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ.

“ಗೀತಾ ಗೋವಿಂದಂ ಚಿತ್ರ ನಗುವಿನ ಗಲಭೆ ಹೆಚ್ಚಿಸುವ ಚಿತ್ರ. ‘ಅರ್ಜುನ್ ರೆಡ್ಡಿ’ ಚಿತ್ರದ ನಂತರ ವಿಜಯ್ ದೇವರಕೊಂಡ ಒಂದು ಒಳ್ಳೆಯ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತಾನು ಏನು ಮಾಡುತ್ತಿದ್ದೇನೆ ಎಂಬುದು ವಿಜಯ್‍ಗೆ ಚೆನ್ನಾಗಿ ತಿಳಿಸಿದೆ. ಈ ಚಿತ್ರದಲ್ಲಿ ಸಾಕಷ್ಟು ಹಾಸ್ಯ ಸನ್ನಿವೇಶಗಳಿವೆ. ಪರಶುರಾಮ್ ಒಂದು ಒಳ್ಳೆಯ ಚಿತ್ರಕಥೆಯನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ತುಂಬಾನೇ ಚೆನ್ನಾಗಿದೆ. ಇಡೀ ಚಿತ್ರತಂಡಕ್ಕೆ ನನ್ನ ಶುಭಾಶಯ” ಎಂದು ಟ್ವೀಟ್ ಮಾಡಿದ್ದಾರೆ.

ನಿರ್ಮಾಪಕ ಅಲ್ಲು ಅರವಿಂದ್ ಮೆಗಾ ಸ್ಟಾರ್ ಚಿರಂಜೀವಿ ಅವರಿಗೆ ಚಿತ್ರದ ವಿಶೇಷ ಪ್ರದರ್ಶನವಿಟ್ಟಿದ್ದರು. ಚಿತ್ರ ನೋಡಿದ ನಂತರ ಚಿರಂಜೀವಿ ಅವರು ರಶ್ಮಿಕಾ ಅಭಿನಯವನ್ನು ಮೆಚ್ಚಿಕೊಂಡರು. “ರಶ್ಮಿಕಾ ಅವರ ಪಾತ್ರ ನಾಯಕನ ಪಾತ್ರವನ್ನೇ ಡಾಮಿನೇಟ್ ಮಾಡುವಂತಹ ಪಾತ್ರವಾಗಿದ್ದು, ಈ ಪಾತ್ರವನ್ನು ರಶ್ಮಿಕಾ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಕಣ್ಣಿನಲ್ಲೇ ಕೋಪವನ್ನು ತೋರಿಸುತ್ತಾರೆ. ಅಲ್ಲದೇ ಅವರ ಅಭಿನಯ ಕೂಡ ಚೆನ್ನಾಗಿ ಮಾಡಿದ್ದಾರೆ ಎಂದು ಚಿರಂಜೀವಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.

ಅರ್ಜುನ್ ರೆಡ್ಡಿ ಸಿನಿಮಾದ ನಂತರ ವಿಜಯ್ ಒಳ್ಳೆಯ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ವಿಜಯ್ ಹಾಗೂ ರಶ್ಮಿಕಾ ಇಬ್ಬರನ್ನು ಒಟ್ಟಿಗೆ ನೋಡಲು ಖುಷಿಯಾಗುತ್ತದೆ. ಇಬ್ಬರು ನ್ಯಾಚುರಲ್ ಆಗಿ ಅಭಿನಯಿಸಿದ್ದಾರೆ. ಚಿತ್ರದ ಕತೆ, ಸಂಗೀತ ಅದ್ಭುತವಾಗಿದೆ. ಈ ಚಿತ್ರ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಗೀತಾ ಗೋವಿಂದಂ ಚಿತ್ರತಂಡಕ್ಕೆ ನನ್ನ ಶುಭಾಶಯಗಳು ಎಂದು ರಾಮ್‍ಚರಣ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದಾರೆ.

ಭಾರತೀಯ ಚಿತ್ರರಂಗದ ಮೋಸ್ಟ್ ಟ್ಯಾಲೆಂಟೆಡ್, ಹ್ಯಾಂಡ್ಸಮ್ ಹೀರೋ ಮಹೇಶ್ ಬಾಬು ಅವರು ಕೂಡ ರಶ್ಮಿಕಾ ಮಂದಣ್ಣ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ರಶ್ಮಿಕಾರದ್ದು ಬ್ರಿಲಿಯಂಟ್ ಆಕ್ಟಿಂಗ್ ಅಂತ ಕೊಂಡಾಡಿದ್ದಾರೆ. ಈ ಚಿತ್ರವನ್ನು ಬಿಡುಗಡೆಯಾದ ದಿನದಂದೇ ನೋಡಿರುವ ಮಹೇಶ್ ಬಾಬು ಟ್ವೀಟ್ ಮೂಲಕ ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದು ಅಲ್ಲದೇ ರಶ್ಮಿಕಾ ಬಗ್ಗೆ ವಿಶೇಷವಾಗಿ ಮೆಚ್ಚುಗೆ ಸೂಚಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *