ಅಜಾತ ಶತ್ರು ನಿಧನಕ್ಕೆ ಸಂತಾಪ ಕೋರಿದ ಕ್ರೀಡಾ ದಿಗ್ಗಜರು

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಮರಣದ ಬಳಿಕ ಕ್ರೀಡಾ ಲೋಕದಲ್ಲಿ ದುಃಖದ ಅಲೆ ಕಂಡು ಬಂದಿದ್ದು, ಹಲವು ಸ್ಟಾರ್ ಕ್ರೀಡಾ ಪಡುಗಳು ಅಟಲ್ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ದೇಶದಕ್ಕೆ ತುಂಬಲಾರದ ನಷ್ಟವಾಗಿದ್ದು, ಇಡೀ ದೇಶಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರು ನೀಡಿದ ಕೊಡುಗೆಗಳು ಅಪಾರ. ಅವರ ಪ್ರೀತಿ ಪಾತ್ರರಿಗೆ ನನ್ನ ಸಂತ್ವಾನ ಎಂದು ಟೀಂ ಇಂಡಿಯಾ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.

ಘನತೆ ಹಾಗೂ ಗಾಂಭೀರ್ಯದ ವ್ಯಕ್ತಿಯಾದ ಅಟಲ್ ಬಿಹಾರಿ ವಾಜಪೇಯಿಗೆ ಎಲ್ಲಕ್ಕಿಂತ ಭಾರತವೇ ಮೊದಲಾಗಿತ್ತು ಎಂದು ಕ್ರಿಕೆಟ್ ವಿಕ್ಷಣೆಗಾರ ಹರ್ಷ ಭೋಗ್ಲೆ ಹೇಳಿದ್ದಾರೆ.

ಭಾರತದಲ್ಲಿ ಹೆಚ್ಚು ಜನ ಪ್ರೀತಿಸಲ್ಪಟ್ಟ ಪ್ರಧಾನಿ, ಕವಿಯನ್ನು ಕಳೆದುಕೊಂಡಿದ್ದೇವೆ. ಅವರ ಪ್ರೀತಿ ಪಾತ್ರರಿಗೆ ಹಾಗೂ ಅಭಿಮಾನಿಗಳಿಗೆ ನನ್ನ ಸಂತ್ವಾನ ಎಂದು ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

ಪೋಖ್ರಾನ್ ಸಂಭಾವ್ಯ ನಾಯಕರಾಗಿದ್ದ ಧೈರ್ಯಶಾಲಿ ಅಟಲ್‍ಜೀ, ಸಿದ್ಧಾಂತದ ರಾಜಕಾರಣಿ, ಸ್ಫೂರ್ತಿದಾಯಕ ಕವಿ, ಪಕ್ಷದ ಉದ್ದಕ್ಕೂ ಮೆಚ್ಚುಗೆ ಪಡೆದ ನಾಯಕರ ಮರಣ ಸರಿಪಡಿಸಲಾಗಷ್ಟು ನಷ್ಟ ತಂದಿದ್ದು, ಒಂದು ಯುಗಾಂತ್ಯವನ್ನು ಗುರುತಿಸಿದೆ ಎಂದು ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.

ದೇಶದ ಕಂಡ ಅತ್ಯುತ್ತಮ ಪ್ರಧಾನಿ, ದಾರ್ಶನಿಕ, ಕವಿ, ರಾಜಕಾರಣಿ, ಕೋಟ್ಯಾಂತರ ವ್ಯಕ್ತಿಗಳ ಮನಗೆದ್ದ ವ್ಯಕ್ತಿ. ಗೌರವವನ್ನು ಬಿಟ್ಟು ಏನು ಸಂಪಾದಿಸದ ನಾಯಕರು ಅಟಲ್ ಎಂದು ಬಾಕ್ಸರ್ ವಿಜೇಂದರ್ ಸಿಂಗ್ ಬರೆದುಕೊಂಡಿದ್ದಾರೆ.

ಇಂದು ಅಟಲ್ ಜೀ ಅವರ ಅಂತಯ ಸಂಸ್ಕಾರ ನಡೆಯಲಿದ್ದು, ಯುಮುನಾ ನದಿ ದಂಡೆಯಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದವರೆಗೆ ಅಂತಿಮ ಯಾತ್ರೆ ನಡೆಯುತ್ತಿದೆ. ಅಂತಿಮ ಯಾತ್ರೆ ಬಳಿಕ ಬ್ರಾಹ್ಮಣ ಸಂಪ್ರದಾಯದಂತೆ ಇಂದು ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರ ಸ್ಮಾರಕವಿರುವ ವಿಜಯ್‍ಘಾಟ್ ಮತ್ತು ಶಾಂತಿವನದ ಪಕ್ಕದಲ್ಲೇ ಅಟಲ್ ಸ್ಮಾರಕ ನಿರ್ಮಾಣಕ್ಕೆ ನಗರಾಭಿವೃದ್ಧಿ ಇಲಾಖೆ 1.5 ಎಕರೆ ಜಮೀನು ಮೀಸಲಿರಿಸಿದೆ. ಒಟ್ಟಿನಲ್ಲಿ ಅಜಾತ ಶತ್ರುವಿನ ನಿಧನಕ್ಕೆ ಇಡೀ ದೇಶವೇ ಕಣ್ಣೀರು ಹಾಕುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *