6.22 ಇಂಚಿನ ಸ್ಕ್ರೀನ್, 3,260 ಎಂಎಎಚ್ ಬ್ಯಾಟರಿಯ ವಿವೋ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣ ವೈಶಿಷ್ಟ್ಯಗಳೇನು?

ನವದೆಹಲಿ: ಭಾರತದಲ್ಲಿ ಸೆಲ್ಫಿ ಸ್ಮಾರ್ಟ್ ಫೋನ್ ಎಂದೇ ಹೆಸರುವಾಸಿಯಾಗಿರುವ ವಿವೋ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ತನ್ನ ನೂತನ ವೈ81 ಆವೃತ್ತಿಯನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.

ವಿವೋ ಕಂಪೆನಿಯು ಈ ಮೊದಲು ತನ್ನ ನೂತನ ವೈ81 ಆವೃತ್ತಿಯನ್ನು ಜೂನ್ ತಿಂಗಳಲ್ಲಿ ವಿಯಟ್ನಾಂನಲ್ಲಿ ಬಿಡುಗಡೆಮಾಡಿತ್ತು. ಈಗ ಇದೇ ಮಾದರಿಯನ್ನು ಭಾರತದಲ್ಲಿ ಪರಿಚಯಿಸಿದೆ. ವಿವೋ ಹೆಚ್ಚಾಗಿ ಸೆಲ್ಫಿ ಪ್ರಿಯರಿಗಾಗಿ ಉತ್ತಮ ಗುಣಮಟ್ಟ ಹಾಗೂ ಬಜೆಟ್ ಗಾತ್ರದಲ್ಲಿ ಸ್ಮಾರ್ಟ್ ಫೋನ್‍ಗಳನ್ನು ಪರಿಚಯಿಸುತ್ತಾ ಬಂದಿದೆ.

ವೈ81 ಸ್ಮಾರ್ಟ್ ಫೋನ್ ನಲ್ಲಿ ಸೆಲ್ಫಿಗಾಗಿ 5ಎಂಪಿ ಸ್ಮಾರ್ಟ್ ಹೆಚ್‍ಡಿಆರ್ ಕ್ಯಾಮೆರಾ, ಹಿಂದುಗಡೆ 13ಎಂಪಿ ಕ್ಯಾಮೆರಾವನ್ನು ನೀಡಿದೆ. ಕಪ್ಪು ಹಾಗೂ ಬಂಗಾರದ ಬಣ್ಣಗಳಲ್ಲಿ ಈ ಸ್ಮಾರ್ಟ್ ಫೋನ್ ಸಿಗುತ್ತದೆ.

ಬೆಲೆ ಎಷ್ಟು?
ನೂತನ ವಿವೋ ವೈ81 ಸ್ಮಾರ್ಟ್ ಫೋನ್ 3ಜಿಬಿ ರ‍್ಯಾಮ್/32 ಜಿಬಿ ಆತಂರಿಕ ಮೆಮೊರಿಗೆ 12,999 ರೂಪಾಯಿ ನಿಗದಿಯಾಗಿದೆ. ವಿವೋ ಆನ್‍ಲೈನ್ ಸ್ಟೋರ್, ಅಮೇಜಾನ್, ಫ್ಲಿಪ್‍ಕಾರ್ಟ್ ಹಾಗೂ ವಿವೋ ಆಫ್‍ಲೈನ್ ಸ್ಟೋರ್ ಗಳಲ್ಲಿ ಲಭ್ಯವಿರಲಿದೆ.

ಗುಣ ವೈಶಿಷ್ಟ್ಯಗಳು:
ಬಾಡಿ ಮತ್ತು ಡಿಸ್ಪ್ಲೇ: 155.1 x 75 x 7.8 ಮಿ.ಮೀ. ಗಾತ್ರ, 146.5 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸ್ಲಾಟ್ ಸೌಲಭ್ಯ, 6.22 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720X1520 ಪಿಕ್ಸೆಲ್, 19:9 ಅನುಪಾತ, 270ಪಿಪಿಐ)

ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.1 (ಓರಿಯೋ), ಮೀಡಿಯಾಟೆಕ್ 6762 ಆಕ್ಟಾ ಕೋರ್ ಪ್ರೋಸೆಸರ್, 2.0 ಗೀಗಾಹರ್ಟ್ಸ್ ಸ್ಪೀಡ್, 3ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿ ಹೊಂದಿದ್ದು, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ.

ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
ಮುಂಭಾಗ 5ಎಂಪಿ ಎಚ್‍ಡಿ ಕ್ಯಾಮೆರಾ, ಹಿಂಭಾಗ 13 ಎಂಪಿ ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ ಫುಲ್ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದೆ. ಅಲ್ಲದೇ ಗೊರಿಲ್ಲಾ ಸ್ಕ್ರೀನ್ ಪ್ರೊಟೆಕ್ಷನ್, ಫಿಂಗರ್ ಪ್ರಿಂಟ್ ಸೆನ್ಸರ್, ಫೇಸ್ ಅನ್‍ಲಾಕಿಂಗ್ ಹಾಗೂ 3,260 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *