ಸ್ವಾತಂತ್ರ್ಯ ದಿನದ ಶುಭಾಶಯ ಕೋರಿ ಟ್ರೋಲ್ ಮಾಡಿದವನಿಗೆ ಸಾನಿಯಾ ಖಡಕ್ ಉತ್ತರ!

ನವದೆಹಲಿ: ಮಂಗಳವಾರ ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಟ್ವಿಟ್ಟರಿನಲ್ಲಿ ಟ್ರೋಲ್ ಮಾಡಿದ್ದಕ್ಕೆ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಆತನಿಗೆ ಖಡಕ್ ಉತ್ತರ ನೀಡಿದ್ದಾರೆ.

ಆಗಸ್ಟ್ 14ರಂದು ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಸಾನಿಯಾ ಅವರಿಗೆ “ಇಂದು ನಿಮ್ಮ ಸ್ವಾತಂತ್ರ್ಯ ದಿನಾಚರಣೆ ಅಲ್ವಾ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಸಾನಿಯಾ ಮಿರ್ಜಾ” ಎಂದು ಟ್ವೀಟ್ ಮಾಡಿದ್ದಾನೆ.

https://twitter.com/imsamkhiladi/status/1029328951938711552

ಈ ಟ್ವೀಟ್‍ಗೆ ಸಾನಿಯಾ ಪ್ರತಿಕ್ರಿಯಿಸಿ, “ಇಲ್ಲ. ನನ್ನ ಹಾಗೂ ನನ್ನ ದೇಶಕ್ಕೆ ನಾಳೆ ಸ್ವಾತಂತ್ರ್ಯ ದಿನಾಚರಣೆ ದಿನ. ನನ್ನ ಪತಿ ಹಾಗೂ ಅವರ ದೇಶಕ್ಕೆ ಇಂದು ಸ್ವಾತಂತ್ರ್ಯ ದಿನಾಚರಣೆ ಇರುವುದು. ನಿಮ್ಮ ಕನ್ಫ್ಯೂಶನ್ ಸರಿ ಹೋಗಿದೆ ಎಂದು ನಾನು ಭಾವಿಸುತ್ತೇನೆ. ಹೌದು, ನಿಮಗೆ ಸ್ವಾತಂತ್ರ್ಯ ದಿನ ಯಾವಾಗ ಎಂದು ಮರು ಪ್ರಶ್ನೆ ಮಾಡಿ ಸಾನಿಯಾ ಖಡಕ್ ಉತ್ತರ ನೀಡಿದ್ದಾರೆ.

ಸಾನಿಯಾ ಮಿರ್ಜಾ ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೊಯೇಬ್ ಮಲ್ಲಿಕ್ ರನ್ನು 2010ರ ಏಪ್ರಿಲ್ 12ರಂದು ಮದುವೆಯಾಗಿದ್ದರು. ಸದ್ಯ ಸಾನಿಯಾ ಹಾಗೂ ಶೊಯೇಬ್ ತಮ್ಮ ಮೊದಲನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *