ಅಪ್ಪಿಕೊಂಡು ಕಿಸ್ ಮಾಡ್ತಿದ್ದ ಜೋಡಿ ಅರೆಸ್ಟ್!

ಇಸ್ಲಾಮಾಬಾದ್: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‍ನ ಸಾರ್ವಜನಿಕ ಸ್ಥಳದಲ್ಲಿ ಕಾರು ನಿಲ್ಲಿಸಿ, ಅಪ್ಪಿಕೊಂಡು ಕಿಸ್ ಮಾಡುತ್ತಿದ್ದ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ.

ರವಿವಾರ 18 ರಿಂದ 19 ವರ್ಷದ ಜೊಡಿ, ಇಸ್ಲಾಮಾಬಾದ್ ನಗರದ ಮಧ್ಯದ ಪ್ರದೇಶವೊಂದರಲ್ಲಿ ಕಾರು ನಿಲ್ಲಿಸಿ, ಅದರಲ್ಲಿ ಕುಳಿತು ತಬ್ಬಿಕೊಂಡು ಮುತ್ತು ಕೊಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದರೂ, ಗಮನಿಸದ ಜೋಡಿ ತಮ್ಮ ಕಾರ್ಯದಲ್ಲಿಯೇ ನಿರತರಾಗಿದ್ದರು.

ಸಾರ್ವಜನಿಕರಲ್ಲಿ ಅಶೀಲವಾಗಿ ನಡೆದುಕೊಂಡ ಕಾಯ್ದೆ ಅಡಿ ಜೋಡಿಗಳ ಮೇಲೆ ಪ್ರಕರಣ ದಾಖಲಿಸಿ, ಇಸ್ಲಾಮಾಬಾದ್ ನಲ್ಲಿರುವ ಕರಾಚಿ ಕಂಪೆನಿ ಠಾಣೆ ಪೊಲೀಸರು ಬಂಧಿಸಿದ್ದರು. ಈಗ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆರೋಪ ಸಾಬೀತಾದರೆ ಅವರಿಗೆ 3 ತಿಂಗಳ ಜೈಲು, ಇಲ್ಲವೇ ದಂಡ, ಅಥವಾ ಎರಡನ್ನು ನ್ಯಾಯಾಲಯ ವಿಧಿಸಬಹುದು.

ಪಾಕಿಸ್ತಾನ ಬಹುಸಂಖ್ಯಾತ ಮುಸ್ಲಿಂ ರಾಷ್ಟ್ರವಾಗಿದ್ದು, ಪಾರ್ಕ್, ಮಳಿಗೆಗಳಿಗೆ ಭೇಟಿ ನೀಡುವ ಯುವ ಜೋಡಿಗಳಿಗೆ ಪೊಲೀಸರು ತೊಂದರೆ ಕೊಡುತ್ತಿದ್ದಾರೆ ಎಂದು ವರದಿಯಾಗಿದೆ. ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವ ಜೋಡಿಗಳ ಮೇಲೆ ದೌರ್ಜನ್ಯ ಎಸಗಿ ಸುಲಿಗೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಹಲವು ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Comments

Leave a Reply

Your email address will not be published. Required fields are marked *